30 ವರ್ಷಕ್ಕಿಂತ ಕೆಳ ವಯೋಮಾನದವರಲ್ಲಿ ಹೃದ್ರೋಗದಲ್ಲಿ ಹೆಚ್ಚಳ: ಕಾರಣಗಳೇನು ಗೊತ್ತೇ?

0
8417

ಸನ್ಮಾರ್ಗ ವಾರ್ತೆ

ಕೇರಳ,ಅ.20: ಮೂವತ್ತು ವರ್ಷಗಳಿಗಿಂತ ಕೆಳಗಿನ ವಯೋಮಾನದವರಲ್ಲಿ ಹೃದ್ರೋಗ ಸಾಧ್ಯತೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಶ್ರೀಚಿತ್ರ ಇನ್ಸಿಟಿಟ್ಯೂಟ್ ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ರಕ್ತದಲ್ಲಿ ಹೆಚ್ಚಿದ ಕೊಲಸ್ಟ್ರಾಲ್, ಉನ್ನತ ರಕ್ತದೊತ್ತಡ, ಧೂಮಪಾನ, ಮದ್ಯಪಾನ, ಬೊಜ್ಜು, ಸಕ್ಕರೆ ಕಾಯಿಲೆ ಮೂವತ್ತು ವರ್ಷಕ್ಕಿಂತ ಕೆಳವಯೋಮಾನದವರಲ್ಲಿ ಹ್ರದ್ರೋಗಕ್ಕೆ ಕಾರಣವಾಗಿದೆ.

1978ರಿಂದ 2017ರವರೆಗಿನ ಶ್ರೀಚಿತ್ರದಲ್ಲಿ ಹೃದ್ರೋಗ ಲಕ್ಷಣಗಳೊಂದಿಗೆ ಅಂಜಿಯೋಗ್ರಾಮ್‍ಗೆ ಒಳಪಟ್ಟ 159 ಮಂದಿಯಲ್ಲಿ ಅಧ್ಯಯನ ನಡೆದಿದೆ. ಇವರಲ್ಲಿ ಶೇ.92ರಷ್ಟು ಪುರುಷರು ಆಗಿದ್ದಾರೆ.

30 ವರ್ಷ ವಯಸ್ಸಿಗಿಂತ ಕೆಳವಯೋಮಾನದ ಹೃದ್ರೋಗಿಗಳಲ್ಲಿ ಶೇ.64ರಷ್ಟು ಧೂಮಪಾನದವರಿದ್ದರು. ಹೆಚ್ಚು ಕೊಲೊಸ್ಟ್ರಾಲ್ ಶೇ.88 ಮಂದಿಗೆ, ಮದ್ಯಪಾನ ಅಭ್ಯಾಸ ಶೇ.21ರಷ್ಟು ಮಂದಿಗೆ, ಅಧ್ಯಯನದಲ್ಲಿ ಭಾಗವಹಿಸಿದ ಶೇ.82ರಷ್ಟು ಮಂದಿಗೆ ತೀವ್ರವಾದ ಹೃದಯಾಘಾತದ ಲಕ್ಷಣಗಳಿವೆ. ಶೇ.ನಾಲ್ಕರಷ್ಟು ಮಂದಿಗೆ ಮಾತ್ರ ಸಿಹಿಮೂತ್ರ ರೋಗ ಇತ್ತು.

ಬೈಪಾಸ್ ಸರ್ಜರಿಗೆ ಒಳಪಟ್ಟವರ ಸರಾಸರಿ ಶೇ.15ರಷ್ಟಾಗಿದೆ. ರೋಗ ಲಕ್ಷಣ ಕಾಣಿಸಿಕೊಂಡು ಅಂಜಿಯೊಗ್ರಾಮ್ ಮಾಡಿಸಿದ ಬಳಿಕವೂ ರೋಗಿಗಳಲ್ಲಿ ಶೇ.34ರಷ್ಟು ಮಂದಿ ಧೂಮಪಾನ ಮುಂದುವರಿಸುತ್ತಿದ್ದಾರೆ. ಮದ್ಯಪಾನ ತೊರೆಯುವವರು ಶೇ.17ರಷ್ಟು ಮಂದಿ. ಅರ್ಧಾಂಶಕ್ಕೂ ಹೆಚ್ಚು ಮಂದಿ ವ್ಯಾಯಾಮ ಮಾಡುವುದಿಲ್ಲ. ಶೇ.79ರಷ್ಟು ಮಂದಿ ಅಗತ್ಯದಷ್ಟು ತರಕಾರಿ, ಹಣ್ಣುಗಳನ್ನು ಸೇವಿಸುತ್ತಿರಲಿಲ್ಲ. ಇವರಲ್ಲಿ ಶೇ.41ರಷ್ಟು ಮಂದಿ ಸರಿಯಾಗಿ ಮದ್ದನ್ನು ಸೇವಿಸುತ್ತಿರಲಿಲ್ಲ. 5, 10,15, 20 ವರ್ಷದ ರೋಗದಿಂದ ಪಾರಾದವರ ದರ ಯಥಾಕ್ರಮ 84, 70, 58, 52 ಶೇಕಡಾ ಆಗಿದೆ.