ದೇಶದಲ್ಲಿ 5೦ ಸಾವಿರಕ್ಕೂ ಅಧಿಕ ಕೊರೋನ ಸಾವು- ವರದಿ

0
300

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.17: ದೇಶದಲ್ಲಿ 24 ಗಂಟೆಗಳಲ್ಲಿ 57,982 ಮಂದಿ ಕೊರೋನ ದೃಢಪಟ್ಟಿದ್ದು ಇದರೊಂದಿಗೆ ಕೊರೋನ ರೋಗಿಗಳ ಸಂಖ್ಯೆ 26,47,664ಕ್ಕೆ ಏರಿಕೆಯಾಗಿದೆ. 941 ಮಂದಿ ಮೃತಪಟ್ಟಿದ್ದು ಈವರೆಗೆ ಕೊರೋನ ಸಾಂಕ್ರಾಮಿಕ ರೋಗಕ್ಕೆ 50,921 ಜನರು ಬಲಿಯಾಗಿದ್ದಾರೆ.

19,19,843 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. 6,76,900 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಗತ್ತಿನಲ್ಲಿ ಅತ್ಯಂತ ಹೆಚ್ಚು ಕೊರೋನ ಪೀಡಿತರಿರುವ ಮೂರನೆ ದೇಶ ಭಾರತವಾಗಿದೆ. ಅಮೆರಿಕ, ಬ್ರೆಝಿಲ್ ರೋಗಿಗಳ ಸಂಖ್ಯೆಯಲ್ಲಿ ಭಾರತಕ್ಕಿಂತ ಮುಂದಿದೆ.

ಇದೇ ವೇಳೆ ಕಳೆದ 13 ದಿವಸಗಳಲ್ಲಿ ಅತ್ಯಂತ ಹೆಚ್ಚು ರೋಗಿಗಳು ಭಾರತದಲ್ಲಿ ಕಂಡು ಬಂದಿದ್ದಾರೆಂದು ವರದಿಯಾಗಿದೆ.

ಕೊರೋನದ ಸಾವಿನ ಸಂಖ್ಯೆಯಲ್ಲಿ ಭಾರತ ಬ್ರಿಟನನ್ನು ಮೀರಿ ಮುಂದುವರಿದು ನಾಲ್ಕನೆ ಸ್ಥಾನದಲ್ಲಿದೆ. ಪ್ರಥಮ ಸ್ಥಾನದಲ್ಲಿ ಅಮೆರಿಕ ಉಳಿದೆರಡು ಸ್ಥಾನದಲ್ಲಿ ಯಥಾಕ್ರಮವಾಗಿ ಬ್ರೆಝಿಲ್ ಮತ್ತು ಮೆಕ್ಸಿಕೊಗಳಿವೆ.

ಭಾರತದಲ್ಲಿ ರೋಗ ಗುಣಮುಖ ದರ ಶೇ.72.5 ಆಗಿದ್ದು ಮೂರು ಕೋಟಿಗೂ ಹೆಚ್ಚು ಗಂಟಲ ದ್ರವವನ್ನು ಈವರೆಗೆ ಪರೀಕ್ಷಿಸಲಾಗಿದೆ. ನಿನ್ನೆ 7.31 ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಯಿತು. ಪಾಸಿಟಿವಿಟಿ ದರ. ಶೇ.7.92 ಆಗಿದೆ. ಈ ಹಿಂದೆ ಇದು ಶೇ.8.5 ಆಗಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.