ಉತ್ತರಪ್ರದೇಶ: ಸರಕಾರಿ ಅಭಯ ಕೇಂದ್ರದ 90 ಹೆಣ್ಣು ಮಕ್ಕಳಿಗೆ ಕೊರೋನ

0
282

ಸನ್ಮಾರ್ಗ ವಾರ್ತೆ

ಲಕ್ನೊ,ಆ.17: ಉತ್ತರಪ್ರದೇಶದಲ್ಲಿ ಹೆಣ್ಣುಮಕ್ಕಳ ಸರಕಾರಿ ಅಭಯ ಕೇಂದ್ರದಲ್ಲಿ 90 ಮಂದಿಗೆ ಕೊರೋನ ದೃಢಪಟ್ಟಿದ್ದು, ಮಹಿಳಾ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಈ ಕುರರೊತು ಮಾಹಿತಿ ನೀಡಿದ್ದಾರೆ.

ಎರಡು ದಿವಸಗಳಲ್ಲಿ ನಾರೀ ನಿಕೇತನದ 90 ಹೆಣ್ಣು ಮಕ್ಕಳಿಗೆ ಕೊರೋನ ದೃಢಪಟ್ಟಿದ್ದು ಎಲ್ಲರನ್ನೂ ಬೇರೆಡೆ ಇರಿಸಲಾಗಿದೆ ಎಂದು ಉಪನಿರ್ದೇಶಕಿ ನೀತಾ ಐವರ್‍ವಾಲ್ ತಿಳಿಸಿದರು. ಇವರಿಗೆ ಹೇಗೆ ಕೊರೋನ ಬಂದಿದೆ ಎಂಬ ವಿಷಯ ತಿಳಿದು ಬಂದಿಲ್ಲ.

ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 4,454 ಮಂದಿಗೆ ಕೊರೋನ ಸೋಂಕು ತಗುಲಿದ್ದು, 58 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನ ಪೀಡಿತರ ಸಂಖ್ಯೆ 1,54,418ಕ್ಕೆ ತಲುಪಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.