ಕೇಂದ್ರ ಸರಕಾರದಿಂದ ಮೊಬೈಲ್ ರೆಡಿಯೇಶನ್ ತಡೆಯಲು ಸೆಗಣಿಯಿಂದ ಮಾಡಿದ ‘ಗೋಸತ್ವ ಕವಚ್ ಚಿಪ್’ ಬಿಡುಗಡೆ

0
534

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.13: ಮೊಬೈಲ್ ಹ್ಯಾಂಡ್ ಸೆಟ್‍ಗಳ ರೆಡಿಯೇಶನ್ ಅನ್ನು ತಡೆಯಲು ಸೆಗಣಿಯ ವಿಶೇಷ ಚಿಪ್‍ಅನ್ನು ಕೇಂದ್ರ ಸರಕಾರ ಬಿಡುಗಡೆಗೊಳಿಸಿದೆ. ಗೋಸತ್ವ ಚಿಪ್ ಎಂಬ ಹೆಸರಿನ ಚಿಪ್ ರೇಡಿಯೇಶನ್ ತಡೆಯುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತುಗೊಂಡಿದೆ ಎಂದು ರಾಷ್ಟ್ರೀಯ ಕಾಮಧೇನು ಆಯೋಗ್ ಅಧ್ಯಕ್ಷ ವಲ್ಲಭಾಯ್ ಕಠಾರಿಯ ತಿಳಿಸಿದ್ದಾರೆ.

ಸೆಗಣಿ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾಮಧೇನು ದೀಪಾವಳಿ ಅಭಿಯಾನ್ ಪ್ರಚಾರದ ಭಾಗವಾಗಿ ದಿಲ್ಲಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಗೋಸತ್ವ ಕವಚ್ ಅನ್ನು ಕಠಾರಿಯ ಪ್ರದರ್ಶಿಸಿದರು. ಮೊಬೈಲ್ ಫೋನ್‍ನಿಂದ ರೆಡಿಯೇಶನ್ ಸೆಗಣಿ ಚಿಪ್ ತಡೆಯುತ್ತದೆ.

ರೇಡಿಯೇಶನ್‍ನಿಂದಾಗುವ ರೋಗಗಳನ್ನು ತಡೆಯಲು ಸೆಗಣಿ ಚಿಪ್‍ಗಳನ್ನು ಫೋನ್‍ಗಳಲ್ಲಿ ಉಪಯೋಗಿಸಬೇಕೆಂದು ಕಠಾರಿಯ ತಿಳಿಸಿದರು. ರಾಜ್‍ಕೋಟ್‍ನ ಶ್ರೀಜಿ ಗೋಶಾಲೆ ಗೋಸತ್ವ ಚಿಪ್ ಅಭಿವೃದ್ಧಿ ಪಡಿಸಿದೆ. ಸೆಗಣಿ ಎಲ್ಲರನ್ನೂ ಸಂರಕ್ಷಿಸುತ್ತದೆ, ರೆಡಿಯೇಶನ್ ತಡೆಯುತ್ತದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಮನೆಗಳಲ್ಲಿ ಸೆಗಣಿಯ ಉತ್ಪನ್ನಗಳನ್ನು ಇರಿಸಿದರೆ ಜನರನ್ನು ರೆಡಿಯೇಶನ್ ತಗಲದಂತೆ ತಡೆಯುತ್ತದೆ ಎಂದು ಕಟಾರಿಯ ತಿಳಿಸಿದರು.