ಕ್ವಾರಂಟೈನ್ ತಪ್ಪಿಸಲು ಗಡಿಯಲ್ಲೇ ವಿವಾಹವಾದ ಕೇರಳ-ತಮಿಳುನಾಡು ಜೋಡಿ!

0
433

ಸನ್ಮಾರ್ಗ ವಾರ್ತೆ

ಕೊಚ್ಚಿ: ಕೊರೋನ ವೈರಸ್ ಭೀತಿ, ಲಾಕ್ ಡೌನ್‌ನಿಂದಾಗಿ ಅಂತರ್ ರಾಜ್ಯ ಸಂಚಾರಕ್ಕೆ ಕ್ವಾರಂಟೈನ್ ನಿಬಂಧನೆಗಳನ್ನು ಪಾಲಿಸಲು ಸೂಚಿಸಲಾಗಿದ್ದು ಈ ನಡುವೆ ಕ್ವಾರಂಟೈನ್ ತಪ್ಪಿಸಲು ಕೇರಳದ ಇಡುಕ್ಕಿ ಜಿಲ್ಲೆಯ ಚಿನ್ನಾರ್ ಚೆಕ್ ಪೋಸ್ಟ್‌ನಲ್ಲಿ ಜೋಡಿಯೊಂದು ವಿಶಿಷ್ಠ ರೀತಿಯಲ್ಲಿ ವಿವಾಹವಾಗಿದ್ದಾರೆ.

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಎರಡೂ ತೆರಳಲು ನಿಬಂಧನೆಳಿದ್ದು, ಇತರೆ ರಾಜ್ಯಗಳಿಂದ ಬರುವವರು ಮತ್ತು ಹೋಗುವವರು 2 ವಾರಗಳ ಕಾಲ ಕ್ವಾರಂಟೈನ್ ನಲ್ಲಿರಬೇಕಾಗಿರುವ ಕಾರಣ ಗಡಿಭಾಗದ ರಸ್ತೆಯಲ್ಲಿಯೇ ಈ ವಿವಾಹ ನೆರವೇರಿದೆ.

ವರ ರಾಬಿನ್ ಸನ್ ತಮಿಳುನಾಡು ಗಡಿಯಿಂದ ನಡೆದುಕೊಂಡು ಬಂದರೆ ವಧು ವಧು ಪ್ರಿಯಾಂಕಾ ಕೇರಳ ಗಡಿಯಿಂದ ನಡೆದು ಬಂದು ಚೆಕ್‌ಪೋಸ್ಟ್ ತಲುಪಿದರು. ಅರಣ್ಯಾಧಿಕಾರಿಗಳು ಯುವಜೋಡಿಯ ವಿವಾಹ ಸುಸೂತ್ರವಾಗಿ ನೆರವೇರಲು ಬೇಕಾಗುವ ವ್ಯವಸ್ಥೆಗಳನ್ನು ಕಲ್ಪಿಸಿದ್ದರು. ವಧುವರರಿಬ್ಬರೂ ವಿವಾಹದ ವೇಳೆ ಮಾಸ್ಕ್‌ಗಳನ್ನು ಧರಿಸಿದ್ದರು.

ಇಡುಕ್ಕಿಯ ಚಿನ್ನಾರ್‌ನ ಅಬಕಾರಿ ಚೆಕ್ ಪೋಸ್ಟ್‌ನಲ್ಲಿ ಸ್ವತಃ ಅಧಿಕಾರಿಗಳೇ ಹಣ್ಣು ಹಂಪಲುಗಳು ಮತ್ತು ದೀಪಗಳ ವ್ಯವಸ್ಥೆಗಳ ಜೊತೆಗೆ ಸುರಕ್ಷತಾ ವ್ಯವಸ್ಥೆಗಳನ್ನು ಮಾಡಿದ್ದರು. ಎರಡು ಕುಟುಂಬಗಳ ಸದಸ್ಯರು ವಧು ವರರಿಂದ ಸುರಕ್ಷಿತ ಅಂತರ ಕಾಪಾಡಿಕೊಂಡು ವಿವಾಹಕ್ಕೆ ಸಾಕ್ಷಿಯಾದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.