ಪೋರ್ಚುಗೀಸ್ ಫುಟ್ ಬಾಲ್ ಸ್ಟಾರ್ ಕ್ರಿಶ್ಚಿಯಾನೋ ರೊನೊಲ್ಡೊ ಇತರೆಲ್ಲ ಆಟಗಾರರಿಗಿಂತ ಭಿನ್ನ. ಇವರು ಯಾವಾಗಲೂ ಫೆಲೆಸ್ತೀನ್ ಜನರಿಗೆ ಸಹಾಯ ಮಾಡುವುದರಲ್ಲಿ ಬಹಳ ಮುಂದು. ರಮ್ಜಾನ್ ಸಂದರ್ಭದಲ್ಲಿ ಫೆಲೆಸ್ತೀನಿಯರಿಗೆ ನೆರವಾಗಲು ಅವರು ಮತ್ತೊಮ್ಮೆ ಮುಂದೆ ಬಂದಿದ್ದಾರೆ. ಫೆಲೆಸ್ತೀನಿಯರ ಇಫ್ತಾರ್ ಗಾಗಿ ಅವರು 1.5 ಮಿಲ್ಯನ್ ಯೂರೋವನ್ನು ಘೋಷಿಸಿದ್ದಾರೆ. ಅವರ ಈ ನಡೆಗೆ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗಿವೆ. ಈ ಸುದ್ದಿಯನ್ನು 9 ಸ್ಪೋರ್ಟ್ಸ್ ಪ್ರೊ ಎಂಬ ಸ್ಪೋರ್ಟ್ಸ್ ವೆಬ್ ಸೈಟ್ ಪ್ರಕಟಿಸಿದೆ.
ಈ ಹಿಂದೆ ಇಸ್ರೇಲ್ ನ ದಾಳಿಯಲ್ಲಿ ಗಾಯಗೊಂಡ ಐದು ವರ್ಷದ ಅಹ್ಮದ್ ದವಾಬ್ಸ್ ಎಂಬ ಫೆಲೆಸ್ತೀನಿ ಮಗುವನ್ನು ತಾನು ಆಟವಾಡುವ ರಿಯಲ್ ಮಾಡ್ರಿಡ್ ಕ್ಲಬ್ ಗೆ ಕರೆಯಿಸಿ ಸಂತಸವನ್ನು ಹಂಚಿಕೊಂಡಿದ್ದರು.












