ಸನ್ಮಾರ್ಗ ವಾರ್ತೆ
ಐಪಿಎಲ್‍ನಲ್ಲಿ ಹತ್ತರಲ್ಲಿ ಏಳು ಪಂದ್ಯವನ್ನು ಸೋತಿರುವ ಚೆನ್ನೈ ಸೂಪರ್ ಕಿಂಗ್ಸ್‌ನ್ನು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಬೆಂಬಲಸಿದ್ದಾರೆ. ಹೆಚ್ಚು ಕಡಿಮೆ ಈಗ ಪ್ಲೇ ಆಫ್‍ಗೇರುವ ಸಾಧ್ಯತೆಯಿಲ್ಲದ ಸ್ಥಿತಿಯಲ್ಲಿ ಧೋನಿಯ ತಂಡ ಇದೆ. ಆದರೆ ಚೆನ್ನೈಯನ್ನು ಯಾವ ಕಾರಣಕ್ಕೂ ಕಡೆಗಣಿಸುವಂತಿಲ್ಲ ಎಂದು ಇರ್ಫಾನ್ ಪಠಾಣ್ ಹೇಳಿದರು. ಚೆನ್ನೈಗೆ ಇನ್ನೂ ಪ್ಲೇ ಆಪ್‍ಗೆ ಬರಲು ಸಾಧ್ಯವಾಗಬಹುದು. ಕಾರಣ ಆ ತಂಡದಲ್ಲಿ ಧೋನಿಯಿದ್ದಾರೆ. ತಂಡದ ಸಾಧ್ಯತೆಗಳನ್ನು ಕೆಲವೊಮ್ಮೆ ಗಟ್ಟಿಮಾಡುವುದು ಧೋನಿ ಎಂದು ಇರ್ಫಾನ್ ಅಭಿಪ್ರಾಯ ವ್ಯಕ್ತಪಡಿಸಿದರು.
2010ರ ವಿಷಯವನ್ನು ತೆಗೆದುಕೊಳ್ಳಿರಿ. ಅಂದು ಮೊದಲ ಎಳು ಪಂದ್ಯದಲ್ಲಿ ಐದು ಪಂದ್ಯವನ್ನು ಸಿಎಸ್‍ಕೆ ಪರಾಜಯಗೊಂಡಿತ್ತು. ಆದರೆ ಅವರು ಆ ಸೀಝನ್‍ನಲ್ಲಿ ಮುಂಬೈ ಇಂಡಿಯನ್ಸನ್ನು ಸೋಲಿಸಿ ಪ್ರಶಸ್ತಿ ಗೆದ್ದರು. ಇದು ಧೋನಿಯ ಮ್ಯಾಜಿಕ್ ಆಗಿದೆ ಎಂದು ಪಠಾಣ್ ಹೇಳುತ್ತಾರೆ. ಈಗಿನ ಸ್ಥಿತಿಯಿಂದ ಯಾವುದಾದರೊಂದು ತಂಡಕ್ಕೆ ಮುನ್ನಡೆ ಗಳಿಸಲು ಸಾಧ್ಯವಾದರೆ ಅದು ಸಿಎಸ್‍ಕೆ ಎಂದು ಚೆನ್ನಾಗಿ ಗೊತ್ತಿದೆ. ಧೋನಿ ಆಟಗಾರರನ್ನು ತುಂಬ ಕಂಫರ್ಟೆಬಲ್ ಮಾಡುತ್ತಾರೆ. ನಾನು 2015ರಲ್ಲಿ ತಂಡದ ಸದಸ್ಯನಾಗಿದ್ದೆ. ಈ ಪ್ರಾಂಚೈಸಿಗೆ 21-22 ವರ್ಷ ಹೇಗೆ ಕ್ರಿಕೆಟ್‍ನಲ್ಲಿ ಇರಬಹುದು ಎಂದು ಚೆನ್ನಾಗಿ ಗೊತ್ತಿದೆ ಎಂದು ಅವರು ಹೇಳಿದರು.