ಧಾಬೊಲ್ಕರ್ ಹತ್ಯೆ ಪ್ರಕರಣ: ಸನಾತನ್ ಸಂಸ್ಥಾ ವಕೀಲರು ಗೂಢಾಲೋಚನೆಯಲ್ಲಿ ಶಾಮೀಲು

0
507

ಮುಂಬೈ, ಮೇ 27: ಡಾ.ನರೇಂದ್ರ ದಾಭೋಲ್ಕರ್, ಗೌರಿ ಲಂಕೇಶ್ ಕೊಲೆಗೆ ಬಳಸಿದ ಬಂದೂಕ ಆರೋಪಿಗಳು ನಾಶಪಡಿಸಿದ್ದು ಸನಾತನ ಸಂಸ್ಥೆಯ ವಕೀಲ ಸಂಜೀವ್ ಪುನಲೇಕರ್‍ ಸೂಚನೆಯಿಂದಾಗಿತ್ತು ಎಂದು ಸಿಬಿಐ ಹೇಳಿದೆ. ಮಾತ್ರವಲ್ಲ ಗೂಢಾಲೋಚನೆಯಲ್ಲಿ ವಕೀಲರು ಶಾಮೀಲಾಗಿದ್ದಾರೆ. ಶನಿವಾರ ಸಂಜೀವ್ ಮತ್ತು ಅವರ ಸಹಾಯಕನನ್ನು ಬಂಧಿಸಲಾಗಿದ್ದು ಅವರ ಸಹಾಯಕ ವಿಕ್ರಂ ಭಾವೆ 2008ರ ಥಿಯೇಟರ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಎಂದು ಸಿಬಿಐ ಹೇಳಿದೆ.

ದಾಭೋಲ್ಕರ್ ಕೊಲೆಯ ಮೊದಲು ಸ್ಥಳ ಪರಿಶೀಲನೆ ಮತ್ತು ಕೊಲೆ ಯೆಸಗಿದ ಬಳಿಕ ಬೈಕ್ ತೊರೆದು ಗಲು ವಿಕ್ರಂ ಭಾವೆ ಸಹಾಯ ಮಾಡಿದ್ದಾನೆ ಎಂದು ಸಿಬಿಐ ಆರೊಪಿಸಿದೆ. ಸಂಜೀವ್ ಮತ್ತು ವಿಕ್ರಂ ಭಾವೆಯನ್ನು ಕೋರ್ಟು ಸಿಬಿಐ ಕಸ್ಟಡಿಗೆ ಒಪ್ಪಿಸಿತು. ದಾಭೋಲ್ಕರ್‍ ಗುಂಡು ಹಾರಿಸಿದ್ದ ಶರದ್ ಕಲಾಸ್ಕರ್, ಸಚಿನ್ ಅಂದುರೆಯು ವಕೀಲ ಸಂಜೀವ್ ಪುನಲೇಕರ್ ಹೆಸರು ಒಂದು ವರ್ಷದ ಹಿಂದೆಯೇ ಸಿಬಿಐಗೆ ತಿಳಿಸಿದ್ದರು. ಆದರೆ ಈಗ ಸಿಬಿಐ ಇಬ್ಬರನ್ನು ಬಂಧಿಸಿದೆ.