ಕಾಶ್ಮೀರದಲ್ಲಿ ಸೈನಿಕರ ವೀರ ಮರಣ: ಮೋದಿ, ಅಮಿತ್ ಶಾ ಹೊಣೆ – ಸಂಜಯ್ ರಾವತ್

0
158

ಸನ್ಮಾರ್ಗ ವಾರ್ತೆ

ಮುಂಬಯಿ, ಸೆ. 15: ಜಮ್ಮು ಕಾಶ್ಮೀರದ ಸೈನಿಕರ ಮತ್ತು ಪೊಲೀಸಧಿಕಾರಿಗಳ ವೀರ ಮರಣದ ಕುರಿತು ಪ್ರತಿಕ್ರಿಯಿಸಿದ ಶಿವಸೇನೆಯ ನಾಯಕ ಸಂಜಯ್ ರಾವತ್ ಹೃದಯಭೇದಕವಾದ ಘಟನೆ ಇದು. ಇದರ ಪೂರ್ಣ ಹೊಣೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‍ಶಾರದ್ದೆಂದು ಹೇಳಿದರು.

 ಜಿ20 ಯಶಸ್ಸಿನಲ್ಲಿ ಪ್ರಧಾನಿಯ ಮೇಲೆ ಬಿಜೆಪಿ ನಾಯಕರು ಹೂ ಚೆಲ್ಲುತ್ತಿರುವಾಗ ಭಯೋತ್ಪಾದಕರು ಸೈನಿಕರ ಮೇಲೆ ಗುಂಡು ಸುರಿಸಿದರು ಎಂದು ಅವರು ಹೇಳಿದರು.

ಭಾರತದ ಮೂವರು ಹಿರಿಯ ಅಧಿಕಾರಿಗಳು ಕೊಲ್ಲಲ್ಪಟ್ಟಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಅಸಾಮಾನ್ಯ ಪರಿಸ್ಥಿತಿಯಿದೆ ಎಂದು ಸಂಜಯ್ ರಾವತ್ ಹೇಳಿದರು. ಜಮ್ಮುಕಾಶ್ಮೀರದಲ್ಲಿ ಕೇಂದ್ರಾಡಳಿತ ಇರುವುದರಿಂದ ಅಲ್ಲಿನ ಕಾನೂನು ವ್ಯವಸ್ಥೆ ದೃಢಪಡಿಸುವ ಹೊಣೆಗಾರಿಕೆ ಪ್ರಧಾನಿ ಮತ್ತು ಗೃಹ ಸಚಿವರದ್ದಾಗಿದೆ. ಈ ವಿಷಯದಲ್ಲಿ ಪ್ರಧಾನಿ ಮತ್ತು ಗೃಹ ಸಚಿವರು ಹೇಳಿಕೆ ನೀಡಿಲ್ಲ ಏಕೆ ಎಂದು ರಾವತ್ ಪ್ರಶ್ನಿಸಿದರು.

ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗಿನ ಘರ್ಷಣೆಯಲ್ಲಿ ರಾಷ್ಟ್ರೀಯ ರೈಫಲ್ಸ್ ಘಟಕದ ಕಮಾಂಡರ್, ಆರ್ಮಿ ಕರ್ನಲ್ ಮತ್ತು ಮೇಜರ್ ಕಾಶ್ಮೀರ ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋನಕ್ ಮತ್ತು ಡಿಸಿಪಿ ಹುಮಾಯೂನ್ ಭಟ್ ಹತರಾಗಿದ್ದರು.