ಕಾಸರಗೋಡಿನ ಮಹಿಳೆಯ ಕೊಲೆ: ಸೈನೈಡ್ ಮೋಹನ್‍ಗೆ ಜೀವಾವಧಿ ಶಿಕ್ಷೆ

0
480

ಸನ್ಮಾರ್ಗ ವಾರ್ತೆ

ಮಂಗಳೂರು,ಜೂ.26: ಕಾಸರಗೋಡಿನ ಮಹಿಳಾ ಹಾಸ್ಟೆಲ್‍ನ ಅಡಿಗೆ ಕೆಸಲದಾಳಾಗಿದ್ದ 25 ವರ್ಷದ ಮಹಿಳೆಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಸೈನೈಡ್ ಮೋಹನ್‍ಗೆ (57) ಜೀವಾವಧಿ ಶಿಕ್ಷೆಯಾಗಿದೆ.

ಜೀವವಾಧಿ ಶಿಕ್ಷೆ 45,000 ರೂಪಾಯಿ ದಂಡವನ್ನು ಮಂಗಳೂರಿನ ಅಡಿಷನಲ್ ಸೆಶನ್ಸ್ ಕೋರ್ಟು ಜಡ್ಜ್ ಸೈದುನ್ನೀಸಾ ವಿಧಿಸಿ ತೀರ್ಪು ನೀಡಿದ್ದಾರೆ. ಮೋಹನ್ ಸೀರಿಯಲ್ ಕಿಲ್ಲರ್ ಆಗಿದ್ದು, ಬೆಂಗಳೂರಿಗೆ ಕರೆದುಕೊಂಡು ಹೋಗಿ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಂದು ಚಿನ್ನಾಭರಣಗಳನ್ನು ದೋಚಿದ್ದನು.

ಪ್ರಕರಣದಲ್ಲಿ ಮೋಹನ್ ತಪ್ಪಿತಸ್ಥನೆಂದು ಕೋರ್ಟು ಕಂಡು ಕೊಂಡಿದ್ದು. ಗರ್ಭ ನಿರೋಧಕ ಗುಳಿಗೆ ಎಂದು ಹೇಳಿ ಮೋಹನ ಸೈನೈಡ್ ಮಿಶ್ರಣ ಮಾಡಿದ ಮಾತ್ರೆಯನ್ನು ಮಹಿಳೆಗೆ ನೀಡಿದ್ದ. 2003ರಿಂದ 2009ರವೆಗೆ ಈಗ 20 ಮಹಿಳೆಯರನ್ನು ಕೊಂದಿದ್ದಾನೆ. ಮೋಹನ ವಿರುದ್ಧ ಇದ್ದ 20ನೆ ಮತ್ತು ಕೊನೆಯ ಕೊನೆಯ ಕೊಲೆ ಪ್ರಕರಣ ಇದು. ಇತರ ಕೇಸುಗಳಲ್ಲಿ ಶಿಕ್ಷೆಯನ್ನು ವಿಧಿಸಲಾಗಿದೆ.

ಸಮಾನವಾದ ಐದು ಪ್ರಕರಣಗಳಲ್ಲಿ ಈತನಿಗೆ ಗಲ್ಲು ಶಿಕ್ಷೆಯಾಗಿದೆ. ಮೂರು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯಾಗಿದೆ. ಗಲ್ಲು ಶಿಕ್ಷೆಯಲ್ಲಿ ನಂತರ ಎರಡು ಜೀವಾವಧಿ ಶಿಕ್ಷೆಯಾಗಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.