ರಕ್ಕಸ ತೆರೆಗಳ ಸುನಾಮಿಗೆ 16 ವರ್ಷ…

0
431

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.26: ರಕ್ಕಸ ತೆರೆಗಳು 14 ದೇಶಗಳಲ್ಲಿ ತಂದಿಟ್ಟ ಸುನಾಮಿ ದುರಂತಕ್ಕೆ 16ವರ್ಷ ಸಂದಿವೆ. 2004 ಡಿಸೆಂಬರ್ 26ಕ್ಕೆ ಮಾನವ ಇತಿಹಾಸದಲ್ಲಿ ಅತ್ಯಂತ ದೊಡ್ಡ ಮೂರನೇ ಭೂಕಂಪ ಸುಮಾತ್ರ ದ್ವೀಪದಲ್ಲಿ ಹುಟ್ಟಿಕೊಂಡಿತ್ತು. ರಿಕ್ಟರ್ ಮಾಪಕದಲ್ಲಿ 8.3 ತೀವ್ರತೆ ದಾಖಲಾದ ಕಂಪನದಿಂದ 2,27,898 ಮಂದಿ ಮೃತಪಟ್ಟಿದ್ದರು. ಈ ದುರಂತದ ಆಘಾತದಿಂದ ಈಗಲೂ ಹದಿನಾರು ವರ್ಷದ ಬಳಿಕವೂ ದೇಶ ಮುಕ್ತವಾಗಿಲ್ಲ.

ಸಮುದ್ರ ವಿಹಾರಕ್ಕೂ, ಕ್ರಿಸ್‍ಮಸ್ ಹಾಗೂ ಹೊಸ ವರ್ಷ ಆಚರಿಸಲು ಬಂದ ಲಕ್ಷಾಂತರ ಜನರನ್ನು ಸಮುದ್ರ ಆಹುತಿ ಪಡೆಯಿತು. ದೊಡ್ಡದೊಡ್ಡ ಸಮುದ್ರ ತೆರೆಗಳು ಕ್ಷಣಗಳಲ್ಲಿ ದಡವನ್ನು ದಾಟಿ ಬಂತು. ದೊಡ್ಡ ಕಟ್ಟಡ ಮರಗಳು ಬಿದ್ದುಉರುಳಿದವು. ಭಾರತದಲ್ಲಿ ಕೇರಳ, ಕನ್ಯಾಕುಮಾರಿ, ಚೆನ್ನೈ, ಆಂಧ್ರಪ್ರದೇಶ . ಪುದುಚೇರಿ, ಅಂಡಮಾನ್ ನಿಕೊಬರ್ ದ್ವೀಪಗಳಿಗೆ ಸುನಾಮಿ ಬಡಿದಿತ್ತು. ಆ ಆಘಾತದಿಂದ ಹದಿನಾರು ವರ್ಷದ ಬಳಿಕವೂ ಚೇತರಿಸದ ಅದೆಷ್ಟೋ ಜನರು ಈಗಲೂ ಇದ್ದಾರೆ.