ದೆಹಲಿ । ನಿಕ್ಕಿ ಯಾದವ್ ಹತ್ಯೆಗೆ ಸಹಕಾರ; ಆರೋಪಿ ಸಾಹಿಲ್ ಗೆಹ್ಲೋಟ್ ತಂದೆ ಸಹಿತ ಮತ್ತೆ ಐವರ ಬಂಧನ

0
148

ಸನ್ಮಾರ್ಗ ವಾರ್ತೆ

ದೆಹಲಿ : ನಿಕ್ಕಿ ಯಾದವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆ ನಡೆದಿದ್ದು, ಕೊಲೆಗೆ ಸಹಕರಿಸಿದ ಹಿನ್ನೆಲೆಯಲ್ಲಿ ಆರೋಪಿ ಸಾಹಿಲ್ ಗೆಹ್ಲೋಟ್ ತಂದೆ ಸಹಿತ 5 ಜನರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಶ್ರದ್ಧಾ ವಾಕರ್ ಹತ್ಯೆಯ ಬಳಿಕ ಅಂಥದ್ದೇ ಘಟನೆ ಇದಾಗಿದ್ದು, ತನ್ನ ಲಿವ್ ಇನ್ ಪಾರ್ಟ್ನರ್ ನಿಕ್ಕಿ ಯಾದವ್ ಳನ್ನು ಹತ್ಯೆ ಮಾಡಿ, ಆರೋಪಿ ಸಾಹಿಲ್ ಗೆಹ್ಲೋಟ್ ರೆಸ್ಟೊರೆಂಟ್‌ನ ಫ್ರಿಡ್ಜ್‌ನಲ್ಲಿ ಇರಿಸಿದ್ದನು. ಯುವತಿಯ ಶವವನ್ನು ಪತ್ತೆ ಮಾಡಿದ ಕೆಲವು ದಿನಗಳ ನಂತರ, ದೆಹಲಿ ಪೊಲೀಸರು ಕೊಲೆಯನ್ನು ಯೋಜಿಸಲು ತನ್ನ ಮಗನಿಗೆ ಸಹಾಯ ಮಾಡಿದ್ದಕ್ಕಾಗಿ ಸಾಹಿಲ್ ಗೆಹ್ಲೋಟ್ ತಂದೆ ಸಹಿತ ಮೂವರು ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ಬಂಧಿಸುವ ಮೂಲಕ, ಬಂಧಿತರ ಸಂಖ್ಯೆ ಆರಕ್ಕೇರಿದೆ.

23 ವರ್ಷದ ನಿಕ್ಕಿ ಯಾದವ್ ಳನ್ನು ಸಾಹಿಲ್ ಗೆಹ್ಲೋಟ್ ಚಾರ್ಜಿಂಗ್ ಕೇಬಲ್‌ನಿಂದ ಕತ್ತು ಹಿಸುಕಿ, ಕೊಂದಿದ್ದನು ದ್ದಾರೆ. ಬಳಿಕ ತನ್ನ ಕುಟುಂಬದ ಒಡೆತನದಲ್ಲಿರುವ ರೆಸ್ಟೋರೆಂಟ್‌ನಲ್ಲಿದ್ಧ ಫ್ರಿಜ್‌ನಲ್ಲಿ ಶವವನ್ನು ತುಂಬಿಸಿದ್ದನು. ಫೆ. 14ರಂದು ದೆಹಲಿ ಪೊಲೀಸರು ನಿಕ್ಕಿ ಯಾದವ್ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದರು.

ಸಾಹಿಲ್ ಗೆಹ್ಲೋಟ್ ಅವರ ತಂದೆ ಸಹಿತ ಬಂಧಿತ ಇತರರು, ಕೊಲೆಗೆ ಯೋಜನೆ ರೂಪಿಸಲು ಸಹಾಯ ಮಾಡಿದ್ದರು ಎಂದು ತಿಳಿಸಿರುವ ದೆಹಲಿಯ ವಿಶೇಷ ಸಿಪಿ ರವೀಂದರ್ ಯಾದವ್, ಸಾಹಿಲ್ ಮತ್ತು ನಿಕ್ಕಿ ಯಾದವ್ ಅಕ್ಟೋಬರ್ 2020ರಲ್ಲಿ ನೋಯ್ಡಾದ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಆದರೆ ಸಾಹಿಲ್‌ನ ಮನೆಯವರು ಈ ಸಂಬಂಧವನ್ನು ಒಪ್ಪಿರಲಿಲ್ಲ ಮತ್ತು ಬೇರೊಬ್ಬ ಹುಡುಗಿಯೊಂದಿಗೆ ಅವನ ಮದುವೆಯನ್ನು ನಿಶ್ಚಯಿಸಿದ್ದರು ಎಂದು ಹೊಸ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಸಾಹಿಲ್ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದ ಮಾಹಿತಿ ತಿಳಿದ ಬಳಿಕ ನಿಕ್ಕಿ ಯಾದವ್ ಸುಮಾರು ಮೂರು ಗಂಟೆಗಳ ಕಾಲ ಕಾರಿನೊಳಗೆ ಜಗಳವಾಡಿದ್ದರು. ಜಗಳ ಉಲ್ಬಣಗೊಳ್ಳುತ್ತಿದ್ದಂತೆ, ಸಾಹಿಲ್ ಚಾರ್ಜಿಂಗ್ ಕೇಬಲ್ ಬಳಸಿ ನಿಕ್ಕಿಯ ಕತ್ತು ಹಿಸುಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ನಡೆಸಿದ ಬಳಿಕ ಭಯಭೀತರಾಗಿದ್ದರು ಮತ್ತು ಶವವನ್ನು ತಮ್ಮ ಕುಟುಂಬದ ಧಾಬಾದಲ್ಲಿದ್ದ ಫ್ರೀಜರ್‌ನಲ್ಲಿ ಮರೆಮಾಡಲು ನಿರ್ಧರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.