ಜನರಿಗೆ ಆಕ್ಸಿಜನ್ ಕೊಡಲು ಸಾಧ್ಯವಿಲ್ಲದ ಸರಕಾರ ಮನೆಬಾಗಿಲಿಗೆ ರೇಶನ್ ಕುರಿತು ಮಾತಾಡುತ್ತಿದೆ- ರವಿಶಂಕರ್ ಪ್ರಸಾದ್

0
445

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೊರೊನ ಕಾಲದಲ್ಲಿ ದಿಲ್ಲಿಯಲ್ಲಿ ಜನರಿಗೆ ಆಕ್ಸಿಜನ್ ಲಭ್ಯಗೊಳಿಸದ ಸರಕಾರ ಮನೆಬಾಗಿಲಿಗೆ ರೇಶನ್ ಕುರಿತು ಮಾತಾಡುತ್ತಿದೆ ಎಂದು ಕೇಂದ್ರ ಸಚಿವ ರವಿಶಂಖರ್ ಪ್ರಸಾದ್ ಕೇಜ್ರಿವಾಲ್ ಸರಕಾರವನ್ನು ಟೀಕಿಸಿದರು. ದಿಲ್ಲಿ ಸರಕಾರ ರೇಶನ್ ಮಾಫಿಯದ ನಿಯಂತ್ರಣದಲ್ಲಿದೆ ಎಂದು ಅವರು ಆರೋಪಿಸಿದ್ದಾರೆ.

ಕೇಂದ್ರ ಸರಕಾರದ ಒಂದು ದೇಶ, ಒಂದೇ ರೇಶನ್ ಕಾರ್ಡ್ ವ್ಯವಸ್ಥೆಯನ್ನು ದೇಶದ ರಾಜಧಾನಿಯಲ್ಲಿ ಜಾರಿಗೆ ತರದಿರುವುದು ಯಾಕೆ ಎಂದು ರವಿಶಂಕರ್ ಪ್ರಶ್ನಿಸಿದರು.

ಒಂದು ದೇಶ, ಒಂದೇ ರೇಶನ್ ಕಾರ್ಡ್ ಕೇಂದ್ರ ಸರಕಾರದ ಮುಖ್ಯ ಯೋಜನೆಯಾಗಿದೆ. ದೇಶದಲ್ಲಿ 34 ರಾಜ್ಯಗಳಲ್ಲಿ ಕೇಂದ್ರಾಡಳಿತ ಪ್ರದೇಶ ಇದನ್ನು ಜಾರಿಗೆ ತರುತ್ತಿದೆ. ಸಬ್ಸಿಡಿ ನೀಡಿ ರೇಶನ್ ಶಾಪ್‍ಗಳ ಆಹಾರ ಧಾನ್ಯ ವಿತರಣೆಗೆ ಕೇಂದ್ರ ಸರಕಾರ ಪ್ರತೀ ವರ್ಷ ಎರಡು ಲಕ್ಷ ಕೋಟಿ ರೂಪಾಯಿ ವೆಚ್ಚಮಾಡುತ್ತಿದೆ. ಪ್ರಧಾನಿ ಗರಿಬ್ ಕಲ್ಯಾಣ್ ಎಂಬ ಯೋಜನೆಯ ಅಡಿಯಲ್ಲಿ ಬಡವರಿಗೆಲ್ಲ ಉಚಿತ ರೇಶನ್ ಕೊಡಲಾಗುತ್ತಿದೆ ಎಂದು ಪ್ರಸಾದ್ ಹೇಳಿದರು.

ದಿಲ್ಲಿ ಸರಕಾರದ ಮನೆಬಾಗಿಲಿಗೆ ರೇಶನ್ ಯೋಜನೆಗೆ ಕೇಂದ್ರ ಸರಕಾರ ಅನುಮತಿ ನಿರಾಕರಿಸಿದ ಬೆನ್ನಿಗೆ ಅನುಮತಿ ನೀಡಬೇಕೆಂದು ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಪಿಝ್ಝಾ, ಬರ್ಗರ್, ಸ್ಮಾರ್ಟ್‍ಫೋನ್ ಮತ್ತು ಇತರ ಹೋಂ ಡೆಲಿವರಿ ಆಗಿ ಮನೆಗೆ ತಲುಪಿಸಲು ಆಗುವುದಾದರೆ ಯಾಕೆ ರೇಶನ್ ಯಾಕೆ ಮನೆಗೆ ತಲುಪಿಸಲು ಆಗುತ್ತಿಲ್ಲ ಎಂದು ಕೇಜ್ರಿವಾಲ್ ಕೇಳುತ್ತಿದ್ದಾರೆ. ರೇಶನ್ ಅಂಗಡಿಗಳಿಗೆ ಜನರು ಗುಂಪಾಗಿ ಬರುವುದು ಕೊರೋನ ಕಾಲದಲ್ಲಿ ಅಪಾಯಕಾರಿ ರೇಶನ್ ಅಂಗಡಿಗಳು ಸೂಪರ್ ಸ್ಪ್ರೈಡುಗಳಾಗಿ ಬದಲಾಗುತ್ತದೆ ಎಂದು ಕೇಜ್ರಿವಾಲ್ ಆರೋಪಿಸುತ್ತಿದ್ದಾರೆ.

ಮೂಲಭೂತ ಸೌಕರ್ಯ ಕೂಡ ಇಲ್ಲದ ಜನರಿಗೆ ಸಹಾಯ ಮಾಡುವ ಯೋಜನೆ ಆವಿಷ್ಕರಿಸಿದ್ದು. ಮಹಾಮಾರಿ ಅವಸ್ಥೆಯಲ್ಲಿ ಅಂಗಡಿಯಿಂದ ಪಡಿತರ ತರುತ್ತಿರುವವರಿಗೆ ಇದು ಸಹಾಯಕವಾಗಿದೆ ಎಂದು ಕೇಜ್ರಿವಾಲ್ ರವಿಶಂಕರ್ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ದಿಲ್ಲಿ ಸರಕಾರ ರೇಶನ್ ಮಾಫಿಯದ ನಿಯಂತ್ರಣದಲ್ಲಿದೆ ಎಂದು ರವಿಶಂಕರ್ ಆರೋಪಿಸಿದ್ದಾರೆ.