ಗಾಲ್ಫರ್ ವೇಷದಲ್ಲಿ ಡೊನಾಲ್ಡ್ ಟ್ರಂಪ್‌ ಮೇಣದ ಪ್ರತಿಮೆ

0
499

ಸನ್ಮಾರ್ಗ ವಾರ್ತೆ

ಲಂಡನ್,ನ.10: ಪ್ರಸಿದ್ಧ ವ್ಯಕ್ತಿಗಳ ಮೇಣದ ಪ್ರತಿಮೆಗೆ ಖ್ಯಾತವಾದ ಲಂಡನನಿನ ಮ್ಯಾಡಂ ಟುಸಾಡ್ಸ್ ಮ್ಯೂಸಿಯಂನ ಅಧಿಕಾರಿಗಳು ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರ ಪ್ರತಿಮೆಯ ಬಟ್ಟೆಯನ್ನು ತೆಗೆದು ಗಾಲ್ಫರ್ ವೇಷ ತೊಡಿಸಿದ್ದಾರೆ. ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಸೋಲನುಭವಿಸಿದ ಬಳಿಕ ಟ್ರಂಪ್‍ರ ಪ್ರತಿಮೆಗೆ ದಟ್ಟ ಬಣ್ಣದ ಸೂಟನ್ನು ತೊಡಿಸಲಾಯಿತು.

ಟ್ರಂಪ್ ಪ್ರತಿಮೆ ಗಾಲ್ಫ್ ಆಟಗಾರನ ವೇಷದಲ್ಲಿದೆ. ಪೋಲೊ ಟೀ ಶರ್ಟ್, ಗಾಲ್ಫ್ ಟ್ರೌಸರ್, ಟೋಪಿ ಧರಿಸಿದ ಪ್ರತಿಮೆಯ ಚಿತ್ರವು ಮ್ಯೂಸಿಯಂನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಲಭ್ಯವಿದೆ. ‘ಟ್ರಂಪ್ ತನ್ನ ಪ್ರಿಯ ಆಟದತ್ತ ಗಮನ ಹರಿಸುವ ಸಮಯವಾಯಿತು’ ಎಂಬ ಬರಹ ನೀಡಲಾಗಿದೆ. ಚಿತ್ರ ಶರವೇಗದಲ್ಲಿ ವೈರಲ್ ಆಗಿದೆ. ಟ್ರಂಪ್‍ರ ಪ್ರತಿಮೆ ಸಪೂರವಾಗಿದೆ ಎಂದು ಒಬ್ಬರು ಕಮೆಂಟಿಸಿದ್ದಾರೆ. ಮೇಣ ಸಾಕಾಗಿಲ್ಲವೇ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.