ವ್ಯಾಪಕವಾದ ಕೊರೋನಾ: ದಿಲ್ಲಿ, ರಾಜಸ್ಥಾನದಲ್ಲಿ ಲಾಕ್‍ಡೌನ್ ಘೋಷಣೆ

0
489

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದಿಲ್ಲಿ ಮತ್ತು ರಾಜಸ್ಥಾನದಲ್ಲಿ ಕೊರೋನಾ ವ್ಯಾಪಕವಾಗಿ ತೀವ್ರಗೊಂಡ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆಯಾಗಿದೆ. ಇಂದಿನಿಂದ ಮುಂದಿನ ಸೋಮವಾರ (ಎಪ್ರಿಲ್ 26) ರವರೆಗೆ ರಾತ್ರಿ ಹತ್ತು ಗಂಟೆಯಿಂದ ಬೆಳಗ್ಗೆ ಎಂಟು ಗಂಟೆಯವರೆಗೆ ಲಾಕ್ ಡೌನ್ ಹಾಕಲಾಗಿದೆ. ರಾಜಸ್ತಾನದಲ್ಲಿ ಇಂದಿನಿಂದ ಮೇ ಮೂರರವರೆಗೆ ಹದಿನೈದು ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಲಾಕ್‍ಡೌನ್ ಕಾಲದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.

ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್‍ರೊಂದಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಡೆಸಿದ ಸಮಾಲೋಚನೆಯ ಬಳಿಕ ತೀರ್ಮಾನ ತೆಗೆಯಲಾಗಿದೆ. ಕೊರೊನ ಪ್ರತಿರೋಧದ ಭಾಗವಾಗಿ ಹೆಚ್ಚುವರಿ ಬೆಡ್ ಮತ್ತು ಇತರ ಸಾಮಗ್ರಿಗಳನ್ನು ಸಿದ್ಧ ಪಡಿಸುವುದು ಹೊಸ ತೀರ್ಮಾನವಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕೊರೋನ ರೋಗಿಗಳಿಗೆ ಐಸಿಯುವಿನಲ್ಲಿ ಹಾಸಿಗೆಗಳಿಲ್ಲ. ಮಾತ್ರವಲ್ಲ ಆಕ್ಸಿಜನ್ ಕೊರತೆಯೂ ಇದೆ. ಈ ಪರಿಸ್ಥಿತಿಯನ್ನು ಲೆಕ್ಕಕ್ಕೆ ತೆಗೆದು ಹೊಸ ತೀರ್ಮಾನಕ್ಕೆ ಬರಲಾಗಿದೆ. ಸಾರ್ವಜನಿಕರಿಗೆ ಎಲ್ಲ ರೀತಿಯ ಸುರಕ್ಷೆಯನ್ನು ಸರಕಾರ ಮಾಡಿಕೊಡಲಿದೆ ಎಂದು ಕೇಜ್ರಿವಾಲ್ ಹೇಳಿದರು. ಈಗಾಗಲೇ ರಾತ್ರಿ ಮತ್ತು ವಾರಾಂತ್ಯ ಕರ್ಫ್ಯೂ ದಿಲ್ಲಿಯಲ್ಲಿದೆ. ರವಿವಾರ 25,462 ಮಂದಿಗೆ ಹೊಸದಾಗಿ ಕೊರೊನ ಬಂದಿದೆ. ಟೆಸ್ಟ್ ಪೊಸಿಟಿವಿಟಿ ದರ ಶೇ.29.74 ಆಗಿದೆ ಎಂದು ವರದಿಯಾಗಿದೆ.