ಹಕ್ಕಿಜ್ವರ ದೃಢಗೊಂಡ 9 ರಾಜ್ಯಗಳಲ್ಲಿ ಕಟ್ಟೆಚ್ಚರ

0
392

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದಿಲ್ಲಿಯಲ್ಲಿ ಹಕ್ಕಿ ಜ್ವರದಿಂದ ಹಲವಾರು ಹಕ್ಕಿಗಳು ಸತ್ತು ಬಿದ್ದಿದ್ದು ದೇಶಾದ್ಯಂತ ಹಕ್ಕಿ ಜ್ವರದ ಭೀತಿ ಹರಡಿದೆ. ಈ ವರೆಗೆ ಒಂಬತ್ತು ರಾಜ್ಯಗಳಲ್ಲಿ ಹಕ್ಕಿಜ್ವರ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲಪ್ರದೇಶ, ಹರಿಯಾಣ, ಗುಜರಾತ್‍ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಕೊನೆಯದಾಗಿ ದಿಲ್ಲಿಯಲ್ಲಿ ಹಕ್ಕಿಜ್ವರ ಕಂಡು ಬಂದಿತ್ತು. ಹಕ್ಕಿಗಳನ್ನು ತರಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ ಮತ್ತು ಗಾಝಿಪುರದ ಅತ್ಯಂತ ದೊಡ್ಡ ಕೋಳಿ ರಖಂ ಮಾರಾಟ ಕೇಂದ್ರವನ್ನು ಮುಚ್ಚಲಾಗಿದೆ. ಸಂಜಯ ತಟಕಾಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಮೂರು, ನಾಲ್ಕು ದಿವಸಗಳಲ್ಲಿ 27 ಕೊಕ್ಕರೆಗಳು ಇಲ್ಲಿ ಸತ್ತು ಬಿದ್ದಿದ್ದವು. ಬೀಗಂಪುರ, ಸರಿತಾ ವಿಹಾರ, ದಿಲ್‍ಶಾದ್ ಗಾರ್ಡನ್, ದ್ವಾರಕದಲ್ಲಿ ಸಾಮೂಹಿಕವಾಗಿ ಹಕ್ಕಿಗಳು ಸಾಯುತ್ತಿವೆ. 2006ರ ನಂತರ ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಕಂಡು ಬಂದಿದೆ. ಅಲ್ಲಿಯು ಹಕ್ಕಿಗಳನ್ನು ನಾಶಪಡಿಸಲಾಗಿದೆ. ಕೇರಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಹಕ್ಕಿಗಳನ್ನು ನಾಶ ಮಾಡಲಾಗಿದೆ.

ಉತ್ತರಪ್ರದೇಶದಲ್ಲಿ ಹಕ್ಕಿಜ್ವರ ಭೀತಿಯಿಂದ ಮೃಗಾಲಯ, ಪಕ್ಷಿಧಾಮಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಹಿಮಾಚಲ ಪ್ರದೇಶದ ಸ್ಥಿತಿಯೂ ಆಂತಂಕಕಾರಿಯಾಗಿದೆ. ಪೊಂಗ್ ಡಾಮ್ ತಟಾಕದಲ್ಲಿ 215 ದೇಶಾಟನ ಹಕ್ಕಿಗಳು ಸತ್ತಿವೆ. ಇದರೊಂದಿಗೆ ರಾಜ್ಯದಲ್ಲಿ 4,000 ಹಕ್ಕಿಗಳು ಸತ್ತಂತಾಗಿದೆ. ರಾಜಸ್ಥಾನದಲ್ಲಿ 400 ಹಕ್ಕಿಗಳು ಸತ್ತಿದ್ದವು. ಪಂಚಕುಳದ ಫಾರ್ಮ್‌ನಲ್ಲಿ ಬುಧವಾರ ಹಕ್ಕಿಗಳೂ ಸಾಮೂಹಿಕವಾಗಿ ಸತ್ತಿವೆ.

ಹರಿಯಾಣದಲ್ಲಿ 1.6 ಲಕ್ಷ ಹಕ್ಕಿಗಳನ್ನು ನಾಶಪಡಿಸಲು ಸರಕಾರ ನಿರ್ಧರಿಸಿದೆ. 3-4 ಲಕ್ಷ ಹಕ್ಕಿಗಳು ಈಗಾಗಲೇ ಇಲ್ಲಿ ಸತ್ತಿರಬಹುದು ಎಂದು ಅಂದಾಜು ಮಾಡಲಾಗಿದೆ.

ಹಕ್ಕಿಜ್ವರ ಮನುಷ್ಯರಿಗೆ ಹರಡುವುದೇ?

1966ರಲ್ಲಿ ಮೊದಲ ಬಾರಿ ಚೀನದಲ್ಲಿ ಹಕ್ಕಿಜ್ವರ ಕಂಡು ಬಂದಿತ್ತು. ಈ ವೈರಸ್ ಹಲವು ಹಂತಗಳಲ್ಲಿ ಜಗತ್ತಿನ ನಾನಾ ಕಡೆಗೆ ಹರಡಿತು. ಭಾರತದಲ್ಲಿ 2006ರಲ್ಲಿ ಮೊದಲ ಬಾರಿಗೆ ರೋಗ ಕಂಡು ಬಂದಿತ್ತು. ರೋಗ ಹರಡುವ ಎಚ್5ಎನ್1 ವೈರಸ್ ಮಾನವರಿಗೂ ಹರಡುವ ಸಾಧ್ಯತೆಯಿದೆ. ಆದರೆ, ಹೊಸದಾಗಿ ಬಂದಿರುವ ಹಕ್ಕಿಜ್ವರ ಈವರೆಗೆ ಮನುಷ್ಯರಿಗೆ ಹರಡಿರುವುದು ಕಂಡು ಬಂದಿಲ್ಲ. ದೇಶಾದ್ಯಂತ ಹಕ್ಕಿಜ್ವರ ಕಾಣಿಸಿಕೊಂಡಿರುವ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಹಕ್ಕಿಜ್ವರವನ್ನು ನಿರೀಕ್ಷಿಸಲು ಕೇಂದ್ರ ಸರಕಾರ ಸೂಚಿಸಿದೆ. ವಿಷಯದಲ್ಲಿ ಚರ್ಚೆ ಪಾರ್ಲಿಮೆಂಟು ಸಭೆ ಸೇರಿಸಲಾಗಿದೆ.