20 ಲಕ್ಷ ರೂ. ಬಹುಮಾನ ಪಡೆಯಲು ಸೇನಾಧಿಕಾರಿಗಳಿಂದ ನಕಲಿ ಎನ್‍ಕೌಂಟರ್- ಆರೋಪ ಪಟ್ಟಿ ಸಲ್ಲಿಕೆ

0
1009

ಸನ್ಮಾರ್ಗ ವಾರ್ತೆ

ಶೋಪಿಯಾನ್,ಜ.11: ಮೂವರು ಯುವಕರನ್ನು ಮತ್ತು ಇಬ್ಬರು ನಾಗರಿಕರ ಜೊತೆ ಸೇರಿ ಸೈನಿಕ ಕ್ಯಾಪ್ಟನ್ ನಕಲಿ ಎನ್‍ಕೌಂಟರ್‌ನಲ್ಲಿ ಕೊಲೆ ಮಾಡಿರುವುದು 20 ಲಕ್ಷ ರೂಪಾಯಿ ಬಹುಮಾನವನ್ನು ಪಡೆಯಲಿಕ್ಕಾಗಿತ್ತು ಎಂದು ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಕ್ಯಾಪ್ಟನ್ ಭೂಪಿಂದರ್ ಸಿಂಗ್ ವಿರುದ್ಧ ಜಮ್ಮು-ಕಾಶ್ಮೀರದ ಪೊಲೀಸ್ ವಿಶೇಷ ತನಿಖಾ ತಂಡ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದೆ.

ಶೋಪಿಯಾನ್ ಸೆಕ್ಟರ್‌ನ ಅಂಶಿಪುರಿಯಲ್ಲಿ ಕಳೆದ ಜುಲೈ 18ಕ್ಕೆ ನಡೆದಿದ್ದ ನಕಲಿ ಎನ್‍ಕೌಂಟರ್‌ನಲ್ಲಿ ರಜೌರಿ ಜಿಲ್ಲೆಯ ಇಮ್ತಿಯಾಝ್ ಅಹ್ಮದ್, ಅಬ್ರಾರ್ ಅಹ್ಮದ್, ಮುಹಮ್ಮದ್ ಮೃತಪಟ್ಟಿದ್ದರು. ಇವರನ್ನು ಭಯೋತ್ಪಾದಕರೆಂದು ಗುಂಡು ಹೊಡೆದು ಉರುಳಿಸಲಾಗಿತ್ತು. ಸೈನ್ಯ ಸುತ್ತುವರಿದ ವೇಳೆಯೇ ಭೂಪಿಂದರ್ ಸಿಂಗ್ ಇವರನ್ನು ಕೊಲೆ ಮಾಡಿದ್ದರು ಎಂದು ಆರೋಪ ಪಟ್ಟಿಯು ತಿಳಿಸಿದೆ.

ತಾಬಿಶ್ ನಸೀರ್, ಬಿಲಾಲ್ ಅಹ್ಮದ್ ಲೊನ್ ಎಂಬ ಇಬ್ಬರು ನಾಗರಿಕರನ್ನು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ. ಘಟನೆಯ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ರೂಕ್ಷವಾದ ಪ್ರತಿಭಟನೆ ಬಂದಾಗ ಸೇನೆಯೇ ತನಿಖೆಯನ್ನು ಘೋಷಿಸಿತ್ತು. ಭೂಪಿಂದರ್ ಸಿಂಗ್ ಮೇಲ್ನೋಟದಲ್ಲಿ ತಪ್ಪಿತಸ್ಥ ಎಂದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ವಿಶೇಷ ಸಶಸ್ತ್ರ ಸೇನಾ ಕಾನೂನನ್ನು ಅವರು ದುರುಪಯೋಗಿಸಿದ್ದು ಕಂಡು ಬಂದಿತ್ತು.

ನಂತರ ಭೂಪಿಂದರ್ ಸಿಂಗ್ ವಿರುದ್ಧ ಕೋರ್ಟು ಮಾರ್ಷಲ್ ನಡೆದಿದೆ. 75 ಸಾಕ್ಷಿಗಳ ವಿಶೇಷ ತನಿಖಾ ತಂಡ ಪಟ್ಟಿಯಲ್ಲಿ ಸೇರಿಸಿದೆ. ಕ್ಯಾಪ್ಟನ್ ಭೂಪಿಂದರ್ ಸಿಂಗ್ ತಂಡದಲ್ಲಿದ್ದ ಸುಬೇದರ್ ಗುರು ರಾಮ್, ಲ್ಯಾನ್ಸ್ ನಾಯಿಕ್ ರವಿಕುಮಾರ್, ಸೈನಿಕರಾದ ಅಶ್ವಿನಿ ಕುಮಾರ್, ಯೋಗೇಶ್ ಕುಮಾರ್ ಪ್ರಧಾನ ಸಾಕ್ಷಿಗಳಾಗಿದ್ದಾರೆ.