ಪೌರತ್ವ ಹೋರಾಟಕ್ಕಾಗಿ ವಿದ್ಯಾರ್ಥಿಗಳು 20 ಕಿ.ಮೀ ನಡೆದದ್ದೂ ಅಪರಾಧ

0
395

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.17: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಹೋರಾಟದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು 20 ಕಿಲೋಮೀಟರ್ ದೂರದವರೆಗೆ ನಡೆದು ಬಂದಿರುವುದನ್ನು ದಿಲ್ಲಿ ಪೊಲೀಸರು ಅಪರಾಧ ಎಂದು ಬಿಂಬಿಸಿದ್ದಾರೆ.
ಎರಡು ದೊಡ್ಡ ಕಬ್ಬಿಣದ ಪೆಟ್ಟಿಗೆಯಲ್ಲಿ ದಿಲ್ಲಿ ಪೊಲೀಸರು ವಿಚಾರಣಾ ಕೋರ್ಟಿಗೆ 17,500 ಪುಟದ ಬೃಹತ್ ಆರೋಪ ಪಟ್ಟಿಯನ್ನು ಸಿದ್ಧಪಡಿಸಿದ್ದು ಯುಎಪಿಎ ಕಾನೂನು ಹೇರಬಹುದಾದ ಅಪರಾಧವಾಗಿ ಚಿತ್ರಿಸಿದ್ದಾರೆ.

ಪೌರತ್ವ ಹೋರಾಟ ಪ್ರಜಾಪ್ರಭುತ್ವ ಹೋರಾಟವಲ್ಲ ಮತ್ತು ಹೋರಾಟದ ಆರಂಭದಲ್ಲಿಯೇ ಅಕ್ರಮ ನಡೆದಿದೆ ಎಂದು ಆರೋಪಪಟ್ಟಿಯಲ್ಲಿದೆ. ಚಕ್ಕಾಜಾಂ, ಅಥವಾ ರಸ್ತೆ ತಡೆ ಪ್ರಜಾಪ್ರಭುತ್ವ ವಿರೋಧಿ ಹೋರಾಟವಾಗಿದೆ. ಅಕ್ರಮಕ್ಕೆ ಪ್ರೇರಣೆ ನೀಡುವುದಾಗಿದೆ.

ಪೌರತ್ವ ಹೋರಾಟದಲ್ಲಿ ಭಾಗಿಯಾದ 15 ಮಂದಿ ಜನಾಂಗೀಯ ದಾಳಿಯ ಆರೋಪಿಗಳೆಂದು ಆರೋಪ ಪಟ್ಟಿಯಲ್ಲಿದೆ. ಆಮ್ ಆದ್ಮಿ ಪಾರ್ಟಿ ಕೌನ್ಸಿಲರ್ ತಾಹಿರ್ ಹುಸೈನ್ ಪೌರತ್ವ ಹೋರಾಟದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿ ನಾಯಕರ ಹೆಸರುಗಳು ಆರೋಪ ಪಟ್ಟಿಯಲ್ಲಿದೆ. ಇದರಲ್ಲಿ ಹೆಸರಿಲ್ಲದ ಹಲವಾರು ಮಂದಿಯನ್ನು ಸೇರಿಸಿ ಪೂರಕ ಆರೋಪಪಟ್ಟಿಯನ್ನು ಸಲ್ಲಿಸುವುದಾಗಿ ಪೊಲೀಸರು ತಿಳಿಸಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.