ಫೆಲಸ್ತೀನ್ ಜನರಿಗೆ ಬೆಂಬಲ ಮುಂದುವರಿಯಲಿದೆ- ಯುಎಇ

0
421

ಸನ್ಮಾರ್ಗ ವಾರ್ತೆ

ದುಬೈ/ಮನಾಮ,ಸೆ.17: ಇಸ್ರೇಲಿನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದರೂ ಫೆಲಸ್ತೀನ್ ಜನರಿಗೆ ನೀಡುತ್ತಿರುವ ಬೆಂಬಲ ಮುಂದುವರಿಯಲಿದೆ ಎಂದು ಯುಎಇ ವಿದೇಶ ಸಚಿವ ಶೇಕ್ ಅಬ್ದುಲ್ ಬಿನ್ ಝಾಯಿದ್ ಅಲ್ ನಹ್ಯಾನ್ ಹೇಳಿದರು. ಒಪ್ಪಂದಕ್ಕೆ ಸಹಿ ಹಾಕಿದ ಕುರಿತು ಪ್ರತಿಕ್ರಿಯಿಸುವ ವೇಳೆ ಫೆಲಸ್ತೀನ್‍ಗೆ ನೀಡುವ ಬೆಂಬಲ ಮುಂದುವರಿಯುತ್ತಿದೆ ಎಂದಿದ್ದಾರೆ. ‘ಸ್ವತಂತ್ರ ಫೆಲಸ್ತೀನ್ ರಾಷ್ಟ್ರ ಫೆಲಸ್ತೀನ್ ಜನರ ಕನಸು’ ಅದು ನಿಜವಾಗುವವರೆಗೂ ಅವರ ಜೊತೆ ಇರುತ್ತೇವೆ. ಮಧ್ಯಪ್ರಾಚ್ಯ ಸರಿಯಾದ ದಿಶೆಯಲ್ಲಿದೆ ಎಂದು ಝಾಯಿದ್ ಅಲ್‍ನಹ್ಯಾನ್ ಹೇಳಿದರು.

ಶಾಂತಿ ಸ್ಥಾಪನೆ ಮಾಡುವ ಶ್ರಮಕ್ಕೆ ಯುಎಇ ಆದ್ಯತೆ ನೀಡಿದೆ. ಇದು ನಮಗೆ ಮಾತ್ರ ಅದು ಒಪ್ಪಂದವಲ್ಲ ಐತಿಹಾಸಕವಾದ ವಿಷಯವಾಗಿದೆ. ವಲಯದ ಎಲ್ಲರ ಶಾಂತಿ ನಮ್ಮ ಗುರಿಯಾಗಿದೆ. ಬದಲಾವಣೆಗಳು ಇತಿಹಾಸಕ್ಕೆ ದಾರಿ ತೆರೆದುಕೊಡುತ್ತಿದೆ. ಇದು ಅನಿವಾರ್ಯ ಬದಲಾವಣೆಯೆಂದು ಅವರು ಹೇಳಿದರು.

ವೆಸ್ಟ್‌ ಬ್ಯಾಂಕಿನ ವಲಸೆಯನ್ನು ನಿಲ್ಲಿಸಲಾಗುವುದು ಎಂದು ಇಸ್ರೇಲ್ ಮಾತು ಕೊಟ್ಟಿದೆ ಎಂದು ವಿದೇಶ ಸಹ ಸಚಿವ ಅನ್ವರ್ ಗರ್‍ಗೋಷ್ ತಿಳಿಸಿದರು. ಇದರ ಆಧಾರದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದು ಬರೇ ಮಾತಲ್ಲ. ಮಧ್ಯಪ್ರಾಚ್ಯದ ಶಾಂತಿಯನ್ನು ಉದ್ದೇಶಿಸಿದ್ದು ಎಂದರು.

ಮಧ್ಯಪ್ರಾಚ್ಯದ ಐದು ದೇಶಗಳು ಇಸ್ರೇಲಿನೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.