ದಿಲ್ಲಿ ಗಲಭೆಯಲ್ಲಿ ಪೊಲೀಸರ ಸುಳ್ಳು ಸಾಕ್ಷಿ: ನಿರಂತರ ಪೊಲೀಸರನ್ನು ಪ್ರಶ್ನಿಸಿದ ಜಡ್ಜ್ ವರ್ಗಾವಣೆ!

0
1061

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದಿಲ್ಲಿ ಕೋಮು ಗಲಭೆಯಲ್ಲಿ ಪೊಲೀಸರು ಸುಳ್ಳು ಸಾಕ್ಷಿ ಹೇಳುತ್ತಿದ್ದಾರೆ ಎಂದು ದಿಲ್ಲಿ ಹೆಚ್ಚುವರಿ ಸೆಶನ್ಸ್ ಜಡ್ಜ್ ವಿನೋದ ಯಾದವ್ ಹೇಳಿದ್ದಾರೆ. 2020ರಲ್ಲಿ ದಿಲ್ಲಿ ಕೋಮು ಗಲಭೆ ನಡೆದಿತ್ತು. ಪೊಲೀಸನಾದ ಒಬ್ಬ ಸಾಕ್ಷಿ ಮೂರು ಮಂದಿ ಆರೋಪಿಗಳನ್ನು ಗುರುತಿಸಿದಾಗ ಇನ್ನೊಬ್ಬ ಪೊಲೀಸನಿಗೆ ಅವರನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಹೇಳುತ್ತಿರುವುದನ್ನು ಕೋರ್ಟು ಬೆಟ್ಟು ಮಾಡಿದೆ.

ಇದಕ್ಕೆ ಸಂಬಂಧಿಸಿ ಪೊಲೀಸ್ ಡೆಪ್ಯೂಟಿ ಕಮಿಶನರ್‌ರಿಂದ ವಿವರಣೆಯನ್ನು ಕೇಳಲಾಗಿದೆ ಎಂದು ಕೋರ್ಟು ತಿಳಿಸಿದೆ.ಗಲಭೆ ಕೇಸು ಪರಿಗಣಿಸಿದ ಕರಕರ್‍ಡುಮ ಅಡಿಷನಲ್ ಸೆಷನ್ಸ್ ಕೋರ್ಟಿನಿಂದ ನ್ಯೂ ದಿಲ್ಲಿ ಜಿಲ್ಲಾ ರೋಸ್ ಅವೆನ್ಯು ಕೋರ್ಟು ವಿಶೇಷ ಜಡ್ಜ್ ಆಗಿ ವಿನೋದ್ ಯಾದವ್‍ರನ್ನು ವರ್ಗಾಯಿಸಿ ನೇಮಿಸಲಾಗಿದೆ. ಇದು ಪೊಲೀಸರು ಸುಳ್ಳು ಹೇಳುವುದು ಮತ್ತು ತನಿಖಾಧಿಕಾರಿಗಳ ನಿರ್ಲಕ್ಷ್ಯವನ್ನು ಪ್ರಶ್ನಿಸಿದ್ದಕ್ಕೆ ವರ್ಗಾವಣೆ ನಡೆಸಲಾಗಿದೆ.

ಗಲಭೆಗೆ ಸಂಬಂಧಿಸಿ ಪೊಲೀಸರ ತನಿಖೆಯಲ್ಲಿ ನಿಗೂಢತೆ ಇದೆ ಎಂದು ಜಡ್ಜ್ ಯಾದವ್ ನಿರಂತರ ಪೊಲೀಸರನ್ನು ಪ್ರಶ್ನಿಸಿದ್ದರು. ಆರೋಪಿ ಪೊಲೀಸಧಿಕಾರಿಗಳ ವಿರುದ್ಧ ಕ್ರಮ ಜರಗಿಸಲು ದಿಲ್ಲಿ ಪೊಲೀಸ್ ಕಮಿಷನರ್ ರಾಕೇಶ್ ಆಸ್ತಾನರಿಗೆ ಹೇಳಿದ್ದಾರೆ. ಇದಾದ ನಂತರ ವರ್ಗಾವಣೆಯಾಗಿದೆ.