ಕಪ್ಪುಹಣ ಪ್ರಕರಣವನ್ನು ಸರಿಯಾಗಿ ತನಿಖಿಸಿದರೆ ಮೋದಿಯವರೆಗೆ ತಲುಪಬಹುದು- ಕೆ.ಮುರಳೀಧರನ್

0
589

ಸನ್ಮಾರ್ಗ ವಾರ್ತೆ

ಕಣ್ಣೂರ್: ಕಪ್ಪುಹಣ ಪ್ರಕರಣವನ್ನು ತನಿಖೆಗೊಳಪಡಿಸಬೇಕೆಂದು ಕೇರಳ ಸಂಸದ ಕೆ.ಮುರಳೀಧರನ್ ಆಗ್ರಹಿಸಿದ್ದಾರೆ. ಎಲ್ಲವೂ ಸಮಗ್ರ ತನಿಖೆ ನಡೆಯಬೇಕಾಗಿದೆ. ಹೈಕೋರ್ಟು ಅಥವಾ ಸುಪ್ರೀಂ ಕೋರ್ಟಿನಿಂದ ನಿವೃತ್ತರಾದ ಜಡ್ಜ್ ನೇತೃತ್ವದಲ್ಲಿ ತನಿಖೆ ಆಗಬೇಕು. ನಿಷ್ಪಕ್ಷವಾಗಿ ತನಿಖೆ ಮಾಡಿದರೆ ಮೋದಿಯವರೆಗೂ ತಲುಪುಬಹುದು. ಆ ಗಟ್ಸ್ ಮುಖ್ಯಮಂತ್ರಿಗಿದೆಯೇ ಎಂದು ಅವರು ಕೇರಳ ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು. ಕೇರಳದ ಕಡಕ್ಕರ ಕಪ್ಪುಹಣ ಪ್ರಕರಣದ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಅವರು ಮಾತಾಡುತ್ತಿದ್ದರು.

ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಚುನಾವಣಾ ಪ್ರಚಾರಕ್ಕಾಗಿ ಹೆಲಿಕಾಪ್ಟರ್ ಉಪಯೋಗಿಸಿದ್ದು ಅದರಲ್ಲಿ ಹಣವನ್ನು ಸಾಗಿಸಿದ್ದಾರೆ. ಹೆಲಿಕಾಪ್ಟರ್ ಉಪಯೋಗ ಮತ್ತು ಖರ್ಚು ಚುನಾವಣಾ ಆಯೋಗ ತನಿಖಿಸಬೇಕೆಂದು ಮುರಳೀಧರನ್ ಹೇಳಿದರು. ಎರಡು ಕ್ಷೇತ್ರದಲ್ಲಿ ಸುರೇಂದ್ರನ್ ಸ್ಪರ್ಧಿಸಿದ್ದು ಹಣ ಸಾಗಾಟದ ಉದ್ದೇಶದಿಂದಾಗಿತ್ತು.

ಸಿಕೆ ಜಾನುರಿಗೆ ಹಣ ನೀಡಿದ ತನಿಖೆ ನಡೆಯಬೇಕು. ಪ್ರತಿಯೊಬ್ಬ ಬಿಜೆಪಿ ಅಭ್ಯರ್ಥಿಗೆ ಮೂರು ಕೋಟಿ ರೂಪಾಯಿ ಕೇಂದ್ರ ಕೊಟ್ಟಿದೆ. ನಿಷ್ಪಕ್ಷವಾಗಿ ತನಿಖೆ ಮಾಡಿದರೆ ಪ್ರಕರಣವು ಮೋದಿಯವರೆಗೆ ತಲುಪಬಹುದು. ದೇಶವನ್ನಾಳುವ ಪಾರ್ಟಿ ಕಪ್ಪುಹಣವನ್ನು ಚುನಾವಣಾ ಅಭ್ಯರ್ಥಿಗಳಿಗಾಗಿ ಉಪಯೋಗಿಸುತ್ತಿದೆ. ಇದು ಗಂಭೀರ ವಿಷಯವಾಗಿದೆ. ತನಿಖೆ ಬಿಜೆಪಿ ರಾಜ್ಯಾಧ್ಯಕ್ಷರಲ್ಲಿಗೆ ಬಂದು ನಿಂತಿದೆ. ಹೆಲಿಕಾಪ್ಟರ್ ಉಪಯೋಗ ಅಭ್ಯರ್ಥಿಯ ಖರ್ಚಿಗೆ ಬರುತ್ತದೆ. ಸುರೇಂದ್ರನ್ ಕೊಟ್ಟ ಲೆಕ್ಕದಲ್ಲಿ ಹೆಲಿಕಾಪ್ಟರ್ ಬಾಡಿಗೆ ವಿಷಯ ಒಳಗೊಂಡಿದೆಯೇ ಎಂದ ಮುರಳೀಧರನ್ ಪ್ರಶ್ನಿಸಿದರು.