ಹೈಡ್ರೋಜನ್ ಬಲೂನ್‍ನಲ್ಲಿ ಸಾಕು ನಾಯಿಯನ್ನು ಹಾರಿಸಿದ ಯುಟ್ಯೂಬರ್ ಬಂಧನ

0
701

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಹೈಡ್ರೋಜನ್ ಬಲೂನ್ ಉಪಯೋಗಿಸಿ ಸಾಕು ನಾಯಿಯನ್ನು ಹಾರಿಸಿ ಅದನ್ನು ವೀಡಿಯೊ ಚಿತ್ರೀಕರಿಸಿದ ಯುಟ್ಯೂಬರ್ ನನ್ನು ಬಂಧಿಸಲಾಗಿದೆ. ದಿಲ್ಲಿಯ ಯುಟ್ಯೂಬರ್ ಗೌರವ್ ಜೋನ್ ಬಂಧಿತ ವ್ಯಕ್ತಿ . ಪ್ರಾಣಿಗಳೊಂದಿಗೆ ಕ್ರೌರ್ಯವೆಸಗಿದ ಆರೋಪದಡಿಯಲ್ಲಿ ಗೌರವ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಗೌರವ್‍ನ ಯುಟ್ಯೂಬ್ ಚ್ಯಾನೆಲ್‍ಗಾಗಿ ವೀಡಿಯೊ ಚಿತ್ರೀಕರಿಸಿದ್ದು. ಹಲವು ಬಲೂನ್‍ಗಳನ್ನು ಸೇರಿಸಿ ನಾಯಿಯ ದೇಹಕ್ಕೆ ಕಟ್ಟಿದ ಬಳಿಕ ಹಾರಿಸಲಾಗಿದೆ. ದಿಲ್ಲಿಯ ಒಂದು ಪಾರ್ಕಿನಲ್ಲಿ ಚಿತ್ರೀಕರಣ ನಡೆದಿತ್ತು. ನಾಯಿ ಗಾಳಿಯಲ್ಲಿ ಎತ್ತರಕ್ಕೇರಿ ನಿಂತದ್ದು. ಗೌರವ್‍ನ ತಾಯಿ ನಗುತ್ತಿರುವುದು ವೀಡಿಯೊದಲ್ಲಿ ಕಾಣಿಸುತ್ತಿದೆ.
ವೀಡಿಯೊ ಯುಟ್ಯೂಬಿನಲ್ಲಿ ಅಪ್‍ಲೋಡ್ ಮಾಡಲಾಗಿದ್ದು ಘಟನೆ ವಿವಾದವಾಗಿತ್ತು. ಗೌರವ್ ವಿರುದ್ಧ ಪೀಪಲ್ ಫಾರ್ ಅನಿಮಲ್ ಕಾರ್ಯಕರ್ತರು ಮಾಳವೀಯ ನಗರ ಪೊಲೀಸರಿಗೆ ದೂರು ನೀಡಿದ್ದು, ತದನಂತರ ಜಾಗೃತಗೊಂಡ ಪೊಲೀಸರು ಯುಟ್ಯೂಬರ್ ನನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಯುಟ್ಯೂಬರ್ ವೀಡಿಯೊವನ್ನು ಡಿಲೀಟ್ ಮಾಡಿದ್ದಾನೆ.