ಮಮತಾ ಬ್ಯಾನರ್ಜಿ ವಿರುದ್ಧ ಜೈ ಶ್ರೀರಾಮ್ ಕೂಗು: 7 ಮಂದಿ ಬಂಧನ

0
568

ಕೊಲ್ಕತಾ,ಮೇ 31: ಮಮತಾ ಬ್ಯಾನರ್ಜಿಯ ವಾಹನ ಸಾಲು ದಾಟಿ ಹೋಗುವಾಗ ಪ್ರತಿಭಟಿಸಿ ಜೈ ಶ್ರೀರಾಮ್ ಕೂಗು ಹಾಕಿದ ಏಳು ಮಂದಿಯನ್ನು ಬಂಧಿಸಲಾಗಿದೆ. ಗುರುವಾರ ಉತ್ತರ 24 ಪರಗಣ ಜಿಲ್ಲೆಯ ಭತ್‍ಪರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ವಾಹನ ವ್ಯೂಹ ಹೋಗುವಾಗ ಘಟನೆ ನಡೆದಿತ್ತು. ಜೈ ಶ್ರೀರಾಮ್ ಕೂಗಿದವರ ಹತ್ತಿರ ವಾಹನ ನಿಲ್ಲಿಸಿ ಹೊರ ಬಂದ ಮಮತಾ ಬ್ಯಾನರ್ಜಿ ಭದ್ರತಾ ಅಧಿಕಾರಿಗಳೊಂದಿಗೆ ತಂಡದ ಹೆಸರು ವಿವರಗಳನ್ನು ಸಂಗ್ರಹಿಸಲು ಹೇಳಿದ್ದರು. ವಾಹನ ಹೋದ ಬಳಿಕವೂ ಪ್ರತಿಭಟನಾ ಕಾರರು ಜೈ ಶ್ರೀ ರಾಮ್ ಕೂಗು ಮುಂದುವರಿಸಿದರು. ನಂತರ ಶುಕ್ರವಾರ ಪ್ರತಿಭಟನಾಕಾರರ ವಿರುದ್ಧ ಕ್ರಮ ಜರಗಿಸಲಾಗಿದೆ.

ಲೋಕಸಭಾ ಚುನಾವಣೆಗೆ ಸಂಬಂಧಿಸಿ ತೃಣಮೂಲ ಕಾರ್ಯಕರ್ತರ ವಿರುದ್ಧ ನಡೆದ ಹಲ್ಲೆಯ ಪ್ರತಿಭಟನಾ ಕಾರ್ಯಕ್ರಮಕ್ಕೆ ಮಮತಾ ತೆರಳುತ್ತಿದ್ದರು. ನಂತರ ಪ್ರತಿಭಟನಾ ಕಾರ್ಯಕ್ರಮದಲ್ಲಿ ಘಟನೆಯ ಕುರಿತು ಮಾತಾಡಿದರು. ಲೋಕಸಭಾ ಚುನಾವಣಾ ಸಂದರ್ಭದಲ್ಲಿಯೂ ಮಮತಾರ ಕಾರು ದಾಟಿ ಹೋಗುವಾಗ ಜೈಶ್ರೀರಾಂ ಕೂಗಿ ಪ್ರತಿಭಟನೆ ನಡೆಸುವ ರೂಢಿ ಜಾರಿಗೊಂಡಿತ್ತು. ಇದನ್ನು ಕೇಳಿ ಮಮತಾ ಸಹನೆಯ ಕಟ್ಟೆಯೊಡೆಯುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.