ಲಕ್ನೊ,ಜೂ.1: ಉತ್ತರಪ್ರದೇಶದಲ್ಲಿ ಇಬ್ಬರು ಸಮಾಜವಾದಿ ಪಾರ್ಟಿ ನಾಯಕರನ್ನು ಗುಂಡಿಟ್ಟು ಸಾಯಿಸಲಾಗಿದೆ. 41 ವರ್ಷ ವಯಸ್ಸಿನ ಲಾಲ್ಜಿ ಯಾದವ್ರನ್ನು ಸಾರಿ ಏರಿಯಾದ ಸಿರ್ಸದಿ ಕುಪುರಿಯಲ್ಲಿ ಬೈಕ್ನಲ್ಲಿ ಬಂದ ಮೂವರು ಹಂತಕರು ಶುಕ್ರವಾರ 9:30ಕ್ಕೆ ಬೆಳಗ್ಗೆ ಹತ್ಯೆಮಾಡಿ ಪರಾರಿಯಾದರು. ಇನ್ನೊಂದು ಘಟನೆ ಬುದ್ಧನಗರ ಎಂಬಲ್ಲಿ ನಡೆದಿದೆ. ದಾದ್ರಿ ಕ್ಷೇತ್ರ ಸಮಾಜವಾದಿ ಪಾರ್ಟಿ ಅಧ್ಯಕ್ಷ ರಾಮ್ತಕ್ ಕಠಾರಿಯಾ ಕೊಲೆಯಾದ ವ್ಯಕ್ತಿಯಾಗಿದ್ದು ಮುಖವಾಡ ಧರಿಸಿದ ನಾಲ್ವರ ತಂಡ ರಾಮತಕ್ರನ್ನು ಗುಂಡು ಹರಿಸಿ ಕೊಲೆಮಾಡಿದರು. ಇದು ರಾಜಕೀಯ ದ್ವೇಷದ ಕೊಲೆಗಳಲ್ಲ. ಎರಡು ಕೊಲೆಗಳೂ ವೈಯಕ್ತಿಕ ದ್ವೇಷದಿಂದ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.












