ಆರ್‌ಸಿಬಿ ಆಟಗಾರ ದೇವದತ್ತ ಕೇರಳದವರೇ?

0
1004

ಸನ್ಮಾರ್ಗ ವಾರ್ತೆ

ದುಬೈ,ಸೆ.22: ಕೇರಳ ಫುಟ್‍ಬಾಲ್‍ಗೆ ಹೆಸರುವಾಸಿ. ಅಲ್ಲಿಂದ ಈಗ ಒಬ್ಬ ಕ್ರಿಕೆಟ್ ತಾರೆ ಐಪಿಎಲ್‍ನಲ್ಲಿ ಮಿಂಚಿದ್ದಾರೆ. ಕೇರಳದ ಎಡಪ್ಪಾಲ್‍ನ ದೇವದತ್ತ ಪಡಿಕ್ಕಲ್ ಸನ್ ರೈಸರ್ಸ್ ವಿರುದ್ಧ ಅರ್ಧ ಶತಕ ಹೊಡೆದು ಮಿಂಚಿ ತಾರಾ ಆಟಗಾರ ಆಕರ್ಷಣೆ ಸೃಷ್ಟಿಸಿದ್ದಾರೆ. ದೇವದತ್ತರ ಸಾಧನೆ ಕೇರಳದ ಮಲಪ್ಪುರಂನವರಲ್ಲಿ ಸಂಭ್ರಮಕ್ಕೂ ಕಾರಣವಾಗಿದೆ.

ನಿಲಂಬೂರಿನ ಬಾಬು ಮತ್ತು ಎಡಪ್ಪಾಲದ ಅಂಬಿಳಿ ದಂಪತಿಯ ಪುತ್ರ ದೇವದತ್ತ ಪಡಿಕ್ಕಲ್. ಮೊದಲು ಹೈದರಾಬಾದ್ ಮತ್ತು ನಂತರ ಕರ್ನಾಟಕದಲ್ಲಿ ಬೆಳೆದವರು. ಕರ್ನಾಟಕ್ಕಾಗಿ ಆಡಿದ ದೇವದತ್ತ‌, ವಿಜಯ ಹಝಾರೆ ಟ್ರೋಫಿ, ಸಯ್ಯಿದ್ ಮುಶ್ತಾಕ್ ಅಲಿ ಟ್ವೆಂಟಿ20ಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದು ಐಪಿಎಲ್‍ನಲ್ಲಿ ಹೊಳೆಯುವ ಸಾಧನೆಗೆ ಕಾರಣವಾಗಿದೆ. ಕಳೆದ ಋತುವಿನಲ್ಲಿ 20 ಲಕ್ಷ ರೂಪಾಯಿಗೆ ಬೆಂಗಳೂರು ಟೀಮ್ ಇವರನ್ನು ಖರೀದಿಸಿತ್ತು. ಆದರೆ ಈ ವರ್ಷದವರೆಗೂ ಅವರು ಆಡಲು ಕಾಯಬೇಕಾಯಿತು. ಸಿಕ್ಕ ಅವಕಾಶದಲ್ಲಿಯೇ ಮಿಂಚುವ ಮೂಲಕ ದೇವದತ್ತ ಗಮನ ಸೆಳೆದಿದ್ದಾರೆ.

ಆಸ್ಟ್ರೇಲಿಯದ ಟ್ವಿಂಟಿ20 ಕ್ಯಾಪ್ಟನ್ ಅರೊನ್ ಫಿಂಚ್‍ರನ್ನು ಸಾಕ್ಷಿಯಾಗಿರಿಸಿ ದೇವದತ್ತ್ ಬ್ಯಾಟಿನಿಂದ ಸಾಧನೆ ಮಾಡಿದ್ದಾರೆ. ಅವರ ಇನ್ನಿಂಗ್ಸ್‌ನಲ್ಲಿ ಎಂಟು ಬೌಂಡರಿ ಇತ್ತು. 42 ಎಸೆತದಲ್ಲಿ 56 ರನ್‍ಗಳನ್ನು ಪಡೆದುಕೊಂಡಿದ್ದಾರೆ. ಪಂದ್ಯದ ನಂತರ ನಾಯಕ ವಿರಾಟ್ ಕೊಹ್ಲಿ ದೇವದತ್ತರನ್ನು ಪ್ರಶಂಸಿದ್ದು, ದೇವದತ್ತರದ್ದು ಯುವರಾಜ್ ಸಿಂಗ್‍ರಂತಹ ಬ್ಯಾಟಿಂಗ್ ಶೈಲಿಯೆಂದು ಹಲವರು ಹೊಗಳಿದ್ದಾರೆ.