ಹೊಸದಿಲ್ಲಿ,ಸೆ.22(ಸನ್ಮಾರ್ಗ ವಾರ್ತೆ):ಆರ್ಥಿಕ ಕುಸಿತವನ್ನು ನಿಭಾಯಿಸಲು ಕೇಂದ್ರ ಸರಕಾರ ಹೆಚ್ಚಿನ ಸಾಲ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಜನರಿಗೆ ಹಣ ಕೊಡದೆ ದೇಶದ ಆರ್ಥಿಕ ಸ್ಥಿತಿ ಸುಧಾರಿಸದು ಎಂದು ಅವರು ಟ್ವೀಟ್ ಮಾಡಿದರು. ಆರ್ಥಿಕ ಉತ್ತೇಜನಕ್ಕಾಗಿ ವಾಗ್ದತ್ತ ಸಾಲಗಳನ್ನು ಪಡೆದುಕೊಳ್ಳಬಹುದು. ಐಎಂಎಫ್, ವಿಶ್ವಬ್ಯಾಂಕ್, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕುಗಳು ಆರ್ಥಿಕ ಸಹಾಯದ ಮಾತುಕೊಟ್ಟಿವೆ ಎಂದು ಅವರು ಹೇಳಿದರು.
ಈ ಸಂಸ್ಥೆಗಳಿಂದ ಸಾಲ ಪಡೆದುದರಲ್ಲಿ ಒಂದು ಭಾಗವನ್ನು ಬಡವರಿಗೆ ಕೊಡಬೇಕು. ಶೇ.50ರಷ್ಟು ಬಡವರಿಗಾದರು ಈ ಹಣ ತಲುಪಿದ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಎಲ್ಲರಿಗೂ ಹಣದ ಅಗತ್ಯವಿದೆ. ಅದನ್ನು ನೀಡಲು ಸರಕಾರ ಹಿಂಜರಿಯಬಾರದೆಂದು ಚಿದಂಬರಂ ಹೇಳಿದರು.
ದೊಡ್ಡ ಮಟ್ಟದ ಲೋಕಪಯೋಗಿ ಕೆಲಸಗಳನ್ನು ಆರಂಬಿಸುವುದು, ಅದಕ್ಕೆ ಕೂಲಿಯ ಬದಲು ಆಹಾರವಸ್ತು ಭಂಡಾರದಿಂದ ಪಾಲನ್ನು ಬಡವರ ಮನೆಗೆ ತಲುಪಿಸುವುದು, ಮೂಲಭೂತ ಸೌಕರ್ಯ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಒಂದು ಸಾಲ ಪಡೆದುದರಲ್ಲಿ ಒಂದು ಭಾಗವನ್ನು ಉಪಯೋಗಿಸುವುದು. ಜಿಎಸ್‍ಟಿ ನಷ್ಟಪರಿಹಾರ ರಾಜ್ಯಗಳಿಗೆ ಕೊಡಲಿಕ್ಕಾಗಿ ಒಂದು ಭಾಗವನ್ನು ವಿನಿಯೋಗಿಸುವುದು. ಬ್ಯಾಂಕ್‍ಗಳಿಗೆ ಬಂಡವಾಳವಾಗಿ ಸಾಲ ಕೊಡಲು ಸಾಧ್ಯವಾಗುವಂತೆ ಸಾಲದ ಇನ್ನೊಂದು ಭಾವನ್ನು ಉಪಯೋಗಿಸುವುದು. ಡಿಮಾಂಡ್ ಹೆಚ್ಚುವ ಸೂಚನೆ ಸಿಕ್ಕರೆ ಖಾಸಗಿ ಕಾರ್ಪೊರೇಟ್‍ಗಳಿಗೆ ಹೆಚ್ಚಿನ ಹೂಡಿಕೆ ಮಾಡಿ ಉತ್ಪಾದನೆಯನ್ನು ಹೆಚ್ಚಿಸಬಹುದು ಎಂದು ಚಿದಂಬರಂ ಸಲಹೆ ಮಾಡಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸಲು, ಆವಶ್ಯಕ ವಸ್ತುಗಳ ವಿತರಣೆ ನಿಯಂತ್ರಿಸಲು ಜಿಲ್ಲಾ ಕೇಂದ್ರ, ನಗರ ಸಹಕಾರಿ ಬ್ಯಾಂಕುಗಳನ್ನು ನಿಯಂತ್ರಿಸಲು ತಪ್ಪಾದ ಪ್ರಯತ್ನ ಮಾಡುವುದನ್ನು ಕೇಂದ್ರ ಸರಕಾರ ನಿಲ್ಲಿಸಬೇಕು. ಸಂಸ್ಥೆಗಳಿಗೆ ಅಧಿಕಾರ ವಿಕೇಂದ್ರೀಕರಣಕ್ಕೂ ಆರ್ಥಿಕ ಸಬಲೀಕರಣಕ್ಕೂ ಮುಂದಾಗುವುದು ದಿಟ್ಟ ಕ್ರಮವಾಗಿದೆ. ಎಲ್ಲವೂ ಒಂದೇ ಸೂರಿನಡಿಯಲ್ಲಿ ಎಂಬುದು ತುಂಬ ಕೆಟ್ಟ ಆಶಯವಾಗಿದೆ ಎಂದು ಅವರು ಟೀಕಿಸಿದರು.