ಧಾರವಾಡ: ಕಾಮಗಾರಿ ನಡೆಯುತ್ತಿದ್ದ ಕಟ್ಟಡ ಸಂಪೂರ್ಣ ಕುಸಿತ: ಹಲವರು ಅವಶೇಷಗಳಡಿಯಲ್ಲಿ ಶಂಕೆ

0
588

ಬೆಂಗಳೂರು, ಮಾ.19: ನಿರ್ಮಾಣ ಕೆಲಸ ಆಗುತ್ತಿದ್ದ ಬಹು ಮಹಡಿಯ ಕಟ್ಟಡ ಧಾರವಾಡದಲ್ಲಿ ಕುಸಿದು ಬಿದ್ದಿದೆ. ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾಮಿರ್ಕರು ಕಟ್ಟಡದಡಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಧಾರಾವಾಡದ ಹೊಸ ಬಸ್‍ಸ್ಟಾಂಡ್ ಸಮೀಪದಲ್ಲಿ ದುರ್ಗಟನೆ ನಡೆದಿದ್ದು ಸ್ಥಳೀಯರು ಹತ್ತು ಮಂದಿಯನ್ನು ರಕ್ಷಿಸಿದ್ದಾರೆ ಅವಶೇಷಗಳಡಿಯಲ್ಲಿ ಐವತ್ತರಿಂದ ನೂರರಷ್ಟು ಮಂದಿ ಸಿಲುಕಿರಬಹುದು ಎನ್ನಲಾಗುತ್ತಿದೆ. ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ ಕಟ್ಟಡ ಎನ್ನುವ ಮಾತು ಕೂಡಾ ಕೇಳಿ ಬಂದಿದೆ.

ನಾಲ್ಕು ಮಹಡಿಯ ಕಟ್ಟಡದಲ್ಲಿ ಅಂಗಡಿಗಳು ಕೂಡ ಇದ್ದವು. ಮೂರನೆ ಮಹಡಿಯ ಕೆಲಸ ನಡೆಯುತ್ತಿದ್ದಾಗ ಆಕಸ್ಮಾತ್ ಕಟ್ಟಡ ಕುಸಿಯಿತು. ಸ್ಥಳಕ್ಕೆ ಧಾವಿಸಿ ಬಂದ ಅಗ್ನಿಶಾಮಕ ದಳ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಹತ್ತು ಆಂಬುಲೆನ್ಸ್ ಗಳು ಸೇವಾ ಸಜ್ಜಾಗಿ ನಿಂತಿವೆ ಮತ್ತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.