ಇಸ್ರೇಲ್ ನಲ್ಲಿರುವ ಫೆಲೆಸ್ತೀನಿಯರನ್ನು ಬೆದರಿಕೆಯಾಗಿ ತೋರಿಸಿ ಮತ ಯಾಚಿಸುತ್ತಿರುವ ನೆತನ್ಯಾಹು

0
798

ಇಸ್ರೇಲ್ “ಎಲ್ಲಾ ನಾಗರಿಕರ ದೇಶವಲ್ಲ” ಎಂದು ಹೇಳುವ ಮೂಲಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ರಾಷ್ಟ್ರವು ಯಹೂದಿಯರದ್ದೆಂದು ಪರೋಕ್ಷವಾಗಿ ಸೂಚಿಸಿದ್ದಾರೆ ಮತ್ತು ತಮ್ಮ ಈ ಹೇಳಿಕೆಯ ಜೊತೆಗೆ ಇಸ್ರೇಲ್ ಯಹೂದಿಯರದ್ದೆಂದು ಘೋಷಿಸಿ ಕಳೆದ ವರ್ಷ ಜಾರಿಗೆ ತಂದ ವಿವಾದಾತ್ಮಕ ಕಾನೂನನ್ನು ಉಲ್ಲೇಖಿಸಿದ್ದಾರೆ.

ಈ ಕಾನೂನನ್ನು ಕಳೆದ ಬೇಸಿಗೆಯಲ್ಲಿ ಜಾರಿಗೆ ತರಲಾಗಿತ್ತು. ಇದರ ಪ್ರಕಾರ, ಅಧಿಕೃತ ಭಾಷೆಯಿಂದ ಅರೇಬಿಕನ್ನು ತೆಗೆದು ಹಾಕಿ “ವಿಶೇಷ ಸ್ಥಾನಮಾನ” ಭಾಷೆಯನ್ನಾಗಿ ಮಾಡಲಾಗಿತ್ತು ಮತ್ತು ಹೀಬ್ರೂವನ್ನು ಅಧಿಕೃತ ಭಾಷೆಯಾಗಿ ಮಾಡಿ ಮತ್ತು “ಇಸ್ರೇಲ್ ಯಹೂದಿ ಜನರ ಐತಿಹಾಸಿಕ ತಾಯ್ನಾಡು ಮತ್ತು ಅವರಿಗೆ ರಾಷ್ಟ್ರೀಯ ಸ್ವಯಂ-ನಿರ್ಣಯಕ್ಕೆ ವಿಶೇಷ ಹಕ್ಕು ಇದೆ” ಎಂದು ಒತ್ತು ನೀಡಿ ಹೇಳಲಾಗಿತ್ತು. ಅವಿಭಜಿತ ಜೆರುಸಲೆಮ್ ಇಸ್ರೇಲ್ ನ ರಾಜಧಾನಿ ಎಂದು ಸಹ ಇದು ಹೇಳುತ್ತದೆ.

ಇಸ್ರೇಲ್ ನಲ್ಲಿ ಸುಮಾರು 17 ಪ್ರತಿಶತದಷ್ಟು ಜನಸಂಖ್ಯೆಯನ್ನು ಹೊಂದಿರುವ ಫೆಲೆಸ್ತೀನಿ ನಾಗರಿಕರನ್ನು ದೆವ್ವಗಳೆಂದು ನೆತನ್ಯಾಹು ಆರೋಪಿಸಿದ್ದಾರೆ. ಏಪ್ರಿಲ್ 9 ರ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಲಪಂಥೀಯ ಮತದಾನವನ್ನು ಹೆಚ್ಚಿಸುವ ಪ್ರಯತ್ನದಲ್ಲಿರುವ ಅವರು, ತನ್ನ ವಿರೋಧಿಗಳು ಅರಬ್ ಪಕ್ಷಗಳ ಬೆಂಬಲವನ್ನು ಪಡೆಯುತ್ತಾರೆ ಮತ್ತು ಅವರು ಫೆಲೆಸ್ತೀನಿಯರಿಗೆ ಗಮನಾರ್ಹವಾದ ರಿಯಾಯಿತಿಗಳನ್ನು ನೀಡುತ್ತಾರೆ ಎಂದು ಅವರು ಆರೋಪಿಸಿದ್ದಾರೆ.

ಭ್ರಷ್ಟಾಚಾರ ಆರೋಪವನ್ನು ಎದುರಿಸುತ್ತಿರುವ ನೇತನ್ಯಾಹು, ಮಾಜಿ ಸೇನಾ ಮುಖ್ಯಸ್ಥ ಬೆನ್ನಿ ಗ್ಯಾಂಟ್ಸ್ ಮತ್ತು ಮಾಜಿ ಹಣಕಾಸು ಸಚಿವ ಯಾರ್ ಲ್ಯಾಪಿಡ್ ನೇತೃತ್ವದ ಮಧ್ಯಮ ನಿಲುವಿನ ರಾಜಕೀಯ ಮೈತ್ರಿಕೂಟದಿಂದ ಕಠಿಣ ಸವಾಲನ್ನು ಎದುರಿಸುತ್ತಿದ್ದಾರೆ.

ಮೂಲ: ಅಲ್ ಜಜೀರಾ ಮತ್ತು ಇತರ ಸುದ್ದಿ ಸಂಸ್ಥೆಗಳು