ತಂದೆ, ತಾಯಿಗೆ ಹೊಡೆದು 14 ವರ್ಷದ ಬಾಲಕಿಯ ಅಪಹರಣ- ಸ್ಥಳೀಯ ಯುವಕರ ಕೃತ್ಯ

0
657

ಕೊಲ್ಲಂ, ಮಾ. 19: ತಂದೆ ತಾಯಿಗೆ ಹೊಡೆದು ನಿಶಕ್ತರನ್ನಾಗಿಸಿದ ಬಳಿಕ ಹದಿನಾಲ್ಕು ವರ್ಷದ ಹುಡುಗಿಯನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಕೊಲ್ಲಂ ಒಚ್ಚಿರದಲ್ಲಿ ಘಟನೆ ನಡೆದಿದ್ದು ಅಪಹರಣಗೊಂಡ ಬಾಲಕಿ ರಾಜಸ್ಥಾನದ ಮೂಲದವಳು ಎಂದು ತಿಳಿದು ಬಂದಿದೆ.

ಅಪಹರಣಕ್ಕೆ ಸಂಬಂಧಿಸಿ ನಾಲ್ವರು ಸ್ಥಳೀಯ ಯುವಕರಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಸೋಮವಾರ ರಾತ್ರೆ ಒಂಬತ್ತು ಗಂಟೆಗೆ ನಾಲ್ಕರು ಬಾಲಕಿಯನ್ನು ಅಪಹರಿಸಿದ್ದರು.
ಎರಡು ವಾರ ಮೊದಲು ಬಾಲಕಿಯನ್ನು ಅಪಹರಿಸಲಾಗಿತ್ತು ಮತ್ತು ಪೊಲೀಸರು ಮಧ್ಯಪ್ರವೇಶಿಸಿ ಬಾಲಕಿಯನ್ನು ಕರೆತಂದಿದ್ದರು ಎನ್ನಲಾಗುತ್ತಿದೆ. ಅಪಹರಣಕಾರನಲ್ಲಿ ಓರ್ವನು ಅಪಹೃತ ಬಾಲಕಿಯನ್ನು ಪ್ರೀತಿಸುತ್ತಿದ್ದಾನೆ ಎನ್ನಲಾಗಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿ ಅಪಹರಿಸಿದ ನಾಲ್ವರ ವಿರುದ್ಧ ಜಾಮೀನು ರಹಿತ ಕಾನೂನಡಿಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.