ಹೊಸದಿಲ್ಲಿ,ಮೇ 11: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು. ನೀತಿ ಸಂಹಿತೆ ಉಲ್ಲಂಘನೆ ದೂರಿನಲ್ಲಿ ಸ್ಪಷ್ಟ ಮತ್ತು ತಾರತಮ್ಯ ರಹಿತ ನಿರ್ಧಾರ ಕೈಗೊಳ್ಳಬೇಕೆಂದು ರಾಹುಲ್ ಆಗ್ರಹಿಸಿದರು. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆಯೋಗ ನೀಡಿದ ನೋಟಿಸಿಗೆ ರಾಹುಲ್ ಈ ರೀತಿ ಪ್ರತಿಕ್ರಿಯಿಸಿದರು.
ಮಧ್ಯಪ್ರದೇಶದ ಶಾಹ್ದೋಲಿಯಲ್ಲಿನ ರಾಹುಲ್ ಭಾಷಣ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಚುನಾವಣಾ ಆಯೋಗ ನೋಟಿಸು ಕಳುಹಿಸಿತ್ತು. ಭಾರತದ ಅರಣ್ಯ ನೀತಿಯ ಕುರಿತು ಅಲ್ಲಿ ರಾಹುಲ್ ಮಾತಾಡಿದ್ದರು. ಸ್ವತಂತ್ರ ರಾಜಕೀಯ ಭಾಷಣ ಅಲ್ಲಿ ಮಾಡಿದ್ದೇನೆ. ಭಾಷಣದಲ್ಲಿ ವಾಸ್ತವಿಕತೆಯನ್ನು ತಿರುಚಲು ಮತ್ತು ಅಪಗ್ರಹಿಕೆಗೆ ದೂಡಲು ಯತ್ನಿಸಿಲ್ಲ ಎಂದು ರಾಹುಲ್ ಹೇಳಿದರು. ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ನಡೆಸಿದ ವಿವಾದ ಹೇಳಿಕೆಯನ್ನು ಕೂಡ ಚುನಾವಣಾ ಆಯೋಗಕ್ಕೆ ನೀಡಿದ ಉತ್ತರದಲ್ಲಿ ರಾಹುಲ್ ಬೆಟ್ಟು ಮಾಡಿದರು. ಸರಕಾರದ ನೀತಿಗಳ ಟೀಕೆ ಚುನಾವಣಾ ಪ್ರಚಾರದಲ್ಲಿರುತ್ತದೆ. ಇದು ಸ್ವತಂತ್ರ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಸೇರುತ್ತದೆ ಎಂದು ರಾಹುಲ್ ಹೇಳಿದರು.












