ಕೊಲ್ಕತಾ,ಮೇ 11: ಪಶ್ಚಿಮಬಂಗಾಳದ ಎರಡು ಲೋಕಸಭಾ ಕ್ಷೇತ್ರಗಳ ಎರಡು ಮತಗಟ್ಟೆಗಳಲ್ಲಿ ಮತದಾನವನ್ನು ರದ್ದುಪಡಿಸಲಾಗಿದೆ. ಬಾರಕ್ಪುರ್ ಲೋಕಸಭಾ ಕ್ಷೇತ್ರದ ಉದ್ಬೊದನಿ ಮಾಧ್ಯಮಿಕ್ ವಿದ್ಯಾಲಯದ ಮತಗಟ್ಟೆ ಮತ್ತು ಅರಾಂಬಾಗ್ ಲೋಕಸಭಾ ಕ್ಷೇತ್ರದ ಲಾಸ್ಕರ್ಪುರ್ ನೇತಾಜಿ ಪ್ರಾಥಮಿಕ ವಿದ್ಯಾಲಯದ ಮತಗಟ್ಟೆಯಲ್ಲಿನ ಮತದಾನವನ್ನು ರದ್ದುಪಡಿಸಲಾಗಿದೆ.ರವಿವಾರ ಮರುಮತದಾನ ನಡೆಯಲಿದೆ. ಪಶ್ಚಿಮ ಬಂಗಾಳದ ಮತದಾನದ ವೇಳೆ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ವರದಿಯಾಗಿತ್ತು. ಮತದಾನ ಮಾಡಲು ಬಂದ ಇತರ ಪಾರ್ಟಿ ಕಾರ್ಯಕರ್ತರನ್ನು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತಡೆಹಿಡಿದರು ಎಂಬ ಆರೋಪ ಕೇಳಿ ಬಂದಿದೆ. ಚುನಾವಣೆಯ ಸಂಬಂಧ ವ್ಯಾಪಕ ಘರ್ಷಣೆ ಕೂಡ ಆಗಿತ್ತು.












