ಟ್ರುಥ್ ಎಂಬ ಸ್ವಂತ ಸೋಷಿಯಲ್‌ ನೆಟ್ ವರ್ಕ್ ಆರಂಭಕ್ಕೆ ಮುಂದಾದ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್

0
288

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಟ್ರುಥ್ ಎಂಬ ಹೆಸರಿನ ಸ್ವಂತ ಸಾಮಾಜಿಕ ಜಾಲತಾಣವೊಂದನ್ನು ಆರಂಭಿಸಲು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ.

ಟ್ವಿಟರ್, ಫೇಸ್‍ಬುಕ್ ಟ್ರಂಪ್ ರಿಗೆ ನಿಷೇಧ ತೆರವು ಮಾಡದ್ದರಿಂದ ಟ್ರಂಪ್ ತಾನೆ ನೆಟ್‍ವರ್ಕ್ ಕಂಪೆನಿಗೆ ಮುಂದಾಗಿರುವುದಾಗಿ ತಿಳಿದು ಬಂದಿದೆ.

ಟ್ರುಥ್ ಸೋಶಿಯಲ್ ಎಂದು ಟ್ರಂಪ್ ಆರಂಭಿಸುವ ಹೊಸ ಸಾಮಾಜಿಕ ಮಾಧ್ಯಮದ ಹೆಸರಾಗಿರುತ್ತದೆ ಎಂದು ತಿಳಿದು ಬಂದಿದ್ದು, ಟ್ರಂಪ್ ಮೀಡಿಯಾ ಆಂಡ್ ಟೆಕ್ನಾಲಜಿ ಗ್ರೂಪ್ ಇದರ ಮಾಲಕರಾಗಲಿದ್ದಾರೆ.

ಮುಂದಿನ ತಿಂಗಳು ಇದರ ಬಿಟ್ ಪ್ರತಿ ಲಭ್ಯವಾಗಲಿದೆ. ಆ್ಯಪಲ್ ಸ್ಟೋರ್ ರೂಮ್‍ನಲ್ಲಿ ಟ್ರೂತ್ ಸೋಶಿಯಲ್‍ನ ಪ್ರೀ ಆರ್ಡರ್ ಆರಂಭವಾಗಿದೆ. ಜೊತೆಗೆ ವೀಡಿಯೊ ಆನ್ ಡಿಮಾಂಡ್ , ಟಿಎಂಟಿಜಿ ಆರಂಭಿಸಿದೆ.

ನಾನ್ ವಾಕ್ ಎಂಬ ಹೆಸರಿನಲ್ಲಿ ಹಾಸ್ಯ ಕಾರ್ಯಕ್ರಮ ಆರಂಭಿಸಲಿದೆ. ಸ್ಕಾಟ್ ಸೆಂಟ್ ಜಾನ್ಸನ್ ಕಾರ್ಯಕ್ರಮದ ನಿರ್ಮಾಪಕ ಆಗಿರಲಿದ್ದಾರೆ.

ಬೃಹತ್ ಟೆಕ್ ಕಂಪೆನಿಗಲಿಗೆ ಪರ್ಯಾಯವಾಗಿ ಟ್ರುಥ್ ಸೋಶಿಯಲ್ ಆರಂಭವಾಗುತ್ತಿದೆ ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ. ತಾಲಿಬಾನ್ ನಿಂದ ದೊಡ್ಡ ಪ್ರಭಾವವು ಟ್ವಿಟರ್ ಹೊಂದಿದೆ. ಆದರೆ ಇದಕ್ಕೆ ಸಂಬಂಧಿಸಿ ಅಮೆರಿಕ ಅಧ್ಯಕ್ಷರು ಮಾನ ವಹಿಸಿದ್ದಾರೆ ಎಂದು ಟ್ರಂಪ್ ಆರೋಪಿಸಿದರು.

ಕ್ಯಾಪಿಟಲ್ ಬಿಲ್ಡಿಂಗ್‍ನಲ್ಲಿ ನಡೆದ ಘರ್ಷಣೆಯ ನಂತರ ಟ್ರಂಪ್‍ರನ್ನು ವಿವಿಧ ಸಾಮಾಜಿಕ ಮಾಧ್ಯಮಗಳು ನಿಷೇಧಿಸಿವೆ. ನಂತರ ಸ್ವಂತವಾಗಿ ಸೋಶಿಯಲ್ ಮೀಡಿಯಾ ಆಪ್‍ನೊಂದಿಗೆ ಮುಂದೆ ಬರುವೆ ಎಂದು ಟ್ರಂಪ್ ಘೋಷಿಸಿದ್ದರು.