ಅಮರೀಂದರ್ ಸಿಂಗ್ ಹೋದರೆ ಪಾರ್ಟಿಗೆ ತೊಂದರೆ ಇಲ್ಲ- ಕಾಂಗ್ರೆಸ್ ಮುಖಂಡ ಹರೀಶ್ ರಾವತ್

0
395

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪಾರ್ಟಿ ತೊರೆಯುವ ಕುರಿತು ಕಾಂಗ್ರೆಸ್ ಮುಖಂಡ ಹರೀಶ್ ರಾವತ್ ಪ್ರತಿಕ್ರಿಯಿಸಿದ್ದು ಅಮರೀಂದರ್ ಪಾರ್ಟಿ ತೊರೆಯುವುದರಿಂದ ಕಾಂಗ್ರೆಸ್‍ಗೆ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಪಾರ್ಟಿ ನಾಯಕರು ಮತ್ತು ಕಾಂಗ್ರೆಸ್ ನಾಯಕರ ಮತ್ತು ರಾಹುಲ್ ಗಾಂಧಿ ನಡುವೆ ನಡೆದ ಚರ್ಚೆಯಲ್ಲಿ ಅಮರೀಂದರ್ ಸಿಂಗ್ ವಿಷಯ ಚರ್ಚೆಯಾಗಿತ್ತು. ಪಾರ್ಟಿ ತೊರೆಯುವ ಸಾಧ್ಯತೆಯಿರುವ ನಾಯಕರ ಲೆಕ್ಕವನ್ನು ಕಾಂಗ್ರೆಸ್ ಈಗ ಮಾಡುತ್ತಿದೆ. ಸಿಂಗ್‍ರ ನಿಕಟ ಅನುಯಾಯಿಗಳು ಕೂಡ ಪಾರ್ಟಿ ತೊರೆಯುತ್ತಾರೆ ಎಂಬ ವಿವರ ಲಭ್ಯವಾಗಿದೆ.

ಸಿಂಗ್‍ರ ಪಾರ್ಟಿ ಕಟ್ಟುವ ಕಾರ್ಯದ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಬಿಜೆಪಿಯೊಂದಿಗೆ ಕೈ ಜೋಡಿಸಲು ಹೊರಟಿರುವ ಅಮರೀಂದರ್ ಸಿಂಗ್‍ರಿಂದ ಹಲವು ನಾಯಕರು ದೂರ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ತೀರ್ಮಾನದಲ್ಲಿ ಯಾವುದದೇ ಬದಲಾವಣೆಆಗಿಲ್ಲ. ಹೊಸ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿಯ ಕೆಲಸಗಳ ಆಧಾರದಲ್ಲಿ ಪಾರ್ಟಿಯ ಕೆಲಸಗಳನ್ನು ಜನರು ಅವಲೋಕಿಸುತ್ತಾರೆ. ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ರಾವತ್ ಹೇಳಿದರು.

ಅವರ ಜಾತ್ಯತೀತತೆಯನ್ನು ಅಮರೀಂದರ್ ಸಿಂಗ್ ಕೊಂದಿದ್ದಾರೆಂಬಂತೆ ಅನ್ನಿಸುತ್ತಿದೆ. ಒಂದು ವರ್ಷದಿಂದ ದಿಲ್ಲಿಯ ಗಡಿಯಲ್ಲಿರುವ ರೈತರನ್ನು ಬಳಲಿಸುತ್ತಿರುವ ಬಿಜೆಪಿಯನ್ನು ಅವರಿಗೆ ಹೇಗೆ ಕ್ಷಮಿಸಲು ಸಾಧ್ಯ ಎಂದು ರಾವತ್ ಕೇಳಿದರು.

ಇದೇವೇಳೆ ಅಮರೀಂದರ್ ಸಿಂಗ್ ಹೋಗುವುದರಿಂದ ಹೆದರಬೇಕಾಗಿಲ್ಲ ಎಂದು ಉಪಮುಖ್ಯಮಂತ್ರಿ ಸುಖ್‍ಜೀಂದರ್ ಸಿಂಗ್ ರಾಂಧವ ಹೇಳಿದರು. ನಮಗೆ ಯಾವುದೇ ಹೆದರಿಕೆ ಇಲ್ಲ. ಅಮರೀಂದರ್ ಸಿಂಗ್ ಬಿಜೆಪಿ ಜೊತೆ ಹೋದರೆ ಅವರಿಗೆ ಕೆಲವು ಒತ್ತಡಗಳಿರಬಹುದು.

ಇದೇವೇಳೆ, ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು ಪಾರ್ಟಿಯೊಳಗಿನ ಕಲಹ ಕಾಂಗ್ರೆಸ್‌ನ್ನು ಒತ್ತಡದಲ್ಲಿ ಸಿಲುಕಿಸಿದೆ. ಮಂಗಳವಾರ ಅಮರೀಂದರ್ ಸಿಂಗ್ ಹೊಸ ಪಾರ್ಟಿ ಕಟ್ಟುವ ವಿವರ ಬಹಿಂರಂಗವಾಗಿತ್ತು. ಜನರ ಹಿತಾಸಕ್ತಿ ರಕ್ಷಿಸಲು ಪಾರ್ಟಿ ಕಟ್ಟುವುದೆಂದು ಅವರು ತಿಳಿಸಿದ್ದಾರೆ.