ಮಾಜಿ WWE ಮುಖ್ಯಸ್ಥೆಯನ್ನು ಶಿಕ್ಷಣ ಕಾರ್ಯದರ್ಶಿಯಾಗಿ ನೇಮಿಸಿದ ಡೊನಾಲ್ಡ್ ಟ್ರಂಪ್

0
469

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಮಾಜಿ ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (ಡಬ್ಲ್ಯುಡಬ್ಲ್ಯುಇ) ಸಿಇಒ ಲಿಂಡಾ ಮೆಕ್‌ಮೋಹನ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶಿಕ್ಷಣ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ.

ಲಿಂಡಾ ಪೋಷಕರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ ಎಂದು ಬಣ್ಣಿಸಿದ ಟ್ರಂಪ್, ಅಮೆರಿಕದ ರಾಜ್ಯಗಳಿಗೆ ಶಿಕ್ಷಣವನ್ನು ಮರಳಿ ತರಲು ಲಿಂಡಾ ದಾರಿ ಮಾಡಿಕೊಡುತ್ತಾರೆ ಎಂದು ಹೇಳಿದ್ದಾರೆ. ಲಿಂಡಾ 2009 ರಲ್ಲಿ WWE ಅನ್ನು ತೊರೆದ ಬಳಿಕ ಯುಎಸ್ ಸೆನೆಟ್ಗೆ ಸ್ಪರ್ಧಿಸಿದ್ದರು.

ಜನವರಿಯಲ್ಲಿ ಶ್ವೇತಭವನಕ್ಕೆ ಹಿಂದಿರುಗುವ ಮುನ್ನ ರಚಿಸಲಾದ ಟ್ರಂಪ್‌ರ ಪರಿವರ್ತನಾ ತಂಡಕ್ಕೆ ಲಿಂಡಾ ಉಪಾಧ್ಯಕ್ಷರಾಗಿದ್ದರು. ಸರ್ಕಾರದಲ್ಲಿ ಸುಮಾರು 4,000 ಹುದ್ದೆಗಳನ್ನು ಭರ್ತಿ ಮಾಡುವ ಆದೇಶವನ್ನು ಹೊರಡಿಸಲಾಗಿದೆ.

2021 ರಿಂದ, ಅವರು ಟ್ರಂಪ್ ಅವರ ಅಮೇರಿಕಾ ಫಸ್ಟ್ ಪಾಲಿಸಿ ಇನ್‌ಸ್ಟಿಟ್ಯೂಟ್‌ನಲ್ಲಿ ಸೆಂಟರ್ ಫಾರ್ ದಿ ಅಮೇರಿಕನ್ ವರ್ಕರ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಚುನಾವಣಾ ಪ್ರಚಾರದ ಸಮಯದಲ್ಲಿ, ಟ್ರಂಪ್ ಅವರು ಶ್ವೇತಭವನಕ್ಕೆ ಹಿಂತಿರುಗಿದರೆ ಫೆಡರಲ್ ಶಿಕ್ಷಣ ಇಲಾಖೆಯನ್ನು ತೆಗೆದು ಹಾಕುವುದಾಗಿ ಭರವಸೆ ನೀಡಿದ್ದರು.