ಕಾಶ್ಮೀರ: ಪುನಃ ಮಧ್ಯಸ್ಥಿಕೆಯ ಭರವಸೆ ನೀಡಿದ ಟ್ರಂಪ್

0
360

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಆ.21: ಕಾಶ್ಮೀರದ ವಿಷಯದಲ್ಲಿ ಪುನಃ ಮಧ್ಯಸ್ಥಿಕೆ ವಹಿಸುವ ಭರವಸೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ಕಾಶ್ಮೀರದ ಪರಿಸ್ಥಿತಿ ಸಂಕೀರ್ಣವಾದ ಹಿನ್ನೆಲೆಯಲ್ಲಿ ಮಧ್ಯಸ್ಥಿಕೆಗೆ ಸಿದ್ಧ ಎಂದು ಅವರು ಹೇಳಿದರು. ಭಾರತ, ಪಾಕಿಸ್ತಾನ ಕಾಶ್ಮೀರ ಸಮಸ್ಯೆಯನ್ನು ಚರ್ಚೆಯಲ್ಲಿ ಪರಿಹರಿಸಿಕೊಳ್ಳಬೇಕೆಂದು ಅವರು ಆಗ್ರಹಿಸಿದರು. ಅಮೆರಿಕದ ಮಾಧ್ಯಮ ಎನ್‍ಬಿಸಿ ನ್ಯೂಸ್‍ಗೆ ನೀಡಿದ ಸಂದರ್ಶನದಲ್ಲಿ ತನ್ನ ನಿಲುವನ್ನು ಟ್ರಂಪ್ ಪುನರುಚ್ಚರಿಸಿದ್ದಾರೆ.

ಕಾಶ್ಮೀರದ ಪರಿಸ್ಥಿತಿ ದುಸ್ಥರವಾಗಿದೆ ಎಂದು ಕಳೆದ ದಿವಸ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡಿದ್ದರು. ಘರ್ಷಣೆಯೆಡೆಗೆ ಹೋಗದೆ ಭಾರತ, ಪಾಕಿಸ್ತಾನ ಉಭಯ ಕಕ್ಷಿ ಚರ್ಚೆಯ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಭಾರತ ಮತ್ತು ಪಾಕಿಸ್ತಾನಗಳ ಪ್ರಧಾನಿಗಳೊಡನೆ ಮಾತಾಡಿರುವೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದರು.

ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಟ್ರಂಪ್ ಸಿದ್ಧತೆ ಪ್ರಕಟಿಸಿದರೂ ಭಾರತ ತಳ್ಳಿಹಾಕಿದೆ. ಇದಾದ ನಂತರ ಎರಡನೇ ಬಾರಿ ಅದೇ ಹೇಳಿಕೆಯೊಂದಿಗೆ ಅಮೆರಿಕ ಅಧ್ಯಕ್ಷರು ಮುಂದೆ ಬಂದಿದ್ದು ಭಾರತ, ಪಾಕಿಸ್ತಾನ ಘರ್ಷಣೆಯ ಸ್ಥಿತಿಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಇಮ್ರಾನ್ ಖಾನ್ ಫೋನ್ ಮುಖಾಂತರ ಮಾತನಾಡಿದ್ದಾರೆ. ಜಮ್ಮು-ಕಾಶ್ಮೀರದ ವಿಷೇಶ ಸ್ಥಾನ ತೆರವು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ ಬಳಿಕ ನೆರೆಹೊರೆಯಲ್ಲಿ ಘರ್ಷಣೆಯು ಚರ್ಚೆಯ ವಿಷಯವಾಗಿ ಪರಿವರ್ತನೆಯಾಗಿದೆ. ಭಾರತ ವಿರುದ್ಧ ದಾಳಿಯನ್ನು ಪ್ರೋತ್ಸಾಹಿಸುವ ನಿಲುವನ್ನು ವಲಯದ ಕೆಲವು ನಾಯಕರು ವ್ಯಕ್ತಪಡಿಸಿದ್ದಾರೆ ಎಂದು ಟ್ರಂಪ್‍ರಿಗೆ ಮೋದಿ ತಿಳಿಸಿದ್ದರು.