ಕೊರೋನ ಬರುವುದೇ ದೈವಾನುಗ್ರಹದಿಂದ- ಡೊನಾಲ್ಡ್ ಟ್ರಂಪ್

0
404

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಅ.8: ಕೊರೋನ ರೋಗ ಬರುವುದು ದೇವನ ಅನುಗ್ರಹದಿಂದ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. ಕೊರೋನ ರೋಗ ತನಗೆ ಬಂದಿರುವುದಕ್ಕೆ ಟ್ರಂಪ್ ಈ ರೀತಿ ವ್ಯಾಖ್ಯಾನಿಸಿದ್ದು, ಅಮೆರಿಕ ಅಧ್ಯಕ್ಷರ ಅಧಿಕೃತ ಸಾಮಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

“ನನಗೆ ಉತ್ತಮ ಎಂದನಿಸುತ್ತದೆ. ಇದು ದೇವನಿಂದಿರುವ ಒಂದು ಅನುಗ್ರಹವಾಗಿದೆ ಎಂದು ಭಾವಿಸುತ್ತೇನೆ. ಇದು ನಿಜವಾದ ಭಾವವನ್ನು ಮರೆಸಿಟ್ಟ ಅನುಗ್ರಹವಾಗಿದೆ. ನಾನು ಅದನ್ನು ಹಿಡಿದುಕೊಂಡೆ” ಎಂದು ಟ್ರಂಪ್ ಹೇಳುತ್ತಿದ್ದಾರೆ.

ಕೊರೋನ ಪ್ರತಿರೋಧ ಮದ್ದು ಮತ್ತು ಚಿಕಿತ್ಸೆಯ ಕುರಿತು ಈ ವಿಡಿಯೋದಲ್ಲಿ ಡೊನಾಲ್ಡ್ ಟ್ರಂಪ್ ವಿವರಿಸಿದ್ದಾರೆ. ನಾನು ಈ ಮದ್ದಿನ ಕುರಿತು ಕೇಳಿಸಿಕೊಂಡೆ. ಅದು ಸೇವಿಸಲು ನಾನು ಬಯಸಿದೆ. ಇದು ನನ್ನದೇ ಸೂಚನೆಯಾಗಿದೆ. ನಂಬಲಾಗುತ್ತಿಲ್ಲ ಅದು ಅತ್ಯಂತ ಶಕ್ತಿಶಾಲಿ ಕೆಲಸ ಮಾಡಿಬಿಟ್ಟಿದೆ” ಎಂದು ಟ್ರಂಪ್ ಹೇಳಿದ್ದಾರೆ.