ಅಡುಗೆ ಅನಿಲ: ವಿತರಣಾ ಸ್ವಾತಂತ್ರ್ಯವನ್ನು ಖಾಸಗಿ ಕಂಪೆನಿಗಳಿಗೆ ನೀಡಿದ ಕೇಂದ್ರ ಸರಕಾರ

0
1072

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.8: ಅಡುಗೆ ಅನಿಲ ಮಾರಾಟಕ್ಕೆ ಖಾಸಗಿ ಕಂಪೆನಿಗಳಿಗೆ ಮುಕ್ತ ಮಾರ್ಕೆಟಿಂಗ್ ಸ್ವಾತಂತ್ರ್ಯ ನೀಡುವ ನೀತಿಗೆ ಕೇಂದ್ರ ಸರಕಾರ ಅಂಗೀಕಾರ ನೀಡಿದೆ.

ಖಾಸಗಿ ವಲಯದ ಅನಿಲೋತ್ಪಾದಕರಾದ ರಿಲಯನ್ಸ್‌ನಂತಹ ಬೃಹತ್ ಕಂಪೆನಿಗಳೇ ಅವರ ಇಷ್ಟದಂತೆ ವಿತರಿಸುವುದು ಸಹಿತ ಮಾರುಕಟ್ಟೆ ಸುಧಾರಣೆ ನೀತಿಗೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.

ಅಡುಗೆ ಅನಿಲಕ್ಕೆ ಬೆಲೆ ನಿಗದಿಗೊಳಿಸುವ ಪೆಟ್ರೋಲಿಯಂ ಸಚಿವಾಲಯದ ಇ-ಏಲಂಗೆ ಪ್ರಧಾನಿ ಅಧ್ಯಕ್ಷತೆಯ ಸಚಿವ ಸಂಪುಟ ಅಂಗೀಕಾರ ನೀಡಿತು. ಬೃಹತ್ ಉತ್ಪಾದಕರಿಗೆ ಇ-ಏಲಂನಲ್ಲಿ ಭಾಗವಹಿಸುವುದಕ್ಕೆ ನಿಷೇಧ ಮುಂದುವರಿಯುತ್ತಾದರೂ ಇವರಿಂದ ಅಂಗೀಕೃತಗೊಂಡಿರುವ ಮಾರಾಟಗಾರರು ಏಲಂನಲ್ಲಿ ನಿಲ್ಲಬಹುದಾಗಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.

ಅಂಗೀಕೃತ ತೈಲಬಾವಿಗಳಿಂದ ಉತ್ಪಾದಿಸುವ ಅನಿಲಗಳ ಬೆಲೆ ನಿಗದಿಗೊಳಿಸುವ ಅಧಿಕಾರವನ್ನು ಈ ಹಿಂದೆಯೇ ಕೇಂದ್ರ ಸರಕಾರ ಖಾಸಗಿ ಕಂಪೆನಿಗಳಿಗೆ ವಹಿಸಿಕೊಟ್ಟಿತ್ತು. ಈಗ ವಿತರಣೆಯ ಪೂರ್ಣ ಸ್ವಾತಂತ್ರವೂ ಅವುಗಳಿಗೆ ಸಿಕ್ಕಿದೆ.

ಇದೇವೇಳೆ, ಅನಿಲೋತ್ಪಾದಕರಾದ ಒಎನ್‍ಜಿಸಿ, ಆಯಿಲ್ ಇಂಡಿಯಾ ಲಿಮಿಟೆಡ್ ಮೊದಲಾದ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಿಗೆ ನಾಮನಿರ್ದೇಶದ ಆಧಾರದಲ್ಲಿ ಅನುಮತಿಸಿರುವ ದರ ನಿರ್ಣಯ ರೀತಿ ಮುಂದುವರಿಯಲಿದೆ.

ಈಗ ಪ್ರತಿದಿನ 84 ಮಿಲಿಯನ್ ಮೆಟ್ರಿಕ್ ಅಡುಗೆ ಅನಿಲ ಭಾರತದಲ್ಲಿ ಉತ್ಪಾದನೆಗೊಳ್ಳುತ್ತಿದೆ. ಹೊಸ ಮಾರುಕಟ್ಟೆ ಸುಧಾರಣೆ 40 ಮೆಟ್ರಿಕ್ ಮಿಲಿಯನ್ ಹೆಚ್ಚು ಉತ್ಪಾದನೆಗೆ ಸಹಾಯಕವಾಗಿದೆ ಎಂದು ಸಚಿವರು ತಿಳಿಸಿದರು.