ಸನ್ಮಾರ್ಗ ವಾರ್ತೆ
ಮುಂಬೈ,ಅ.4: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಯನ್ನು ಮುಂಬೈಯಲ್ಲಿ ಬಂಧಿಸಲಾಗಿದೆ. ಇಂಟಿರೀಯರ್ ಡಿಸೈನರ್ ಅನ್ವಯ್ ನಾಯಿಕ್ ಮತ್ತು ತಾಯಿ ಕುಮುದ್ ನಾಯಿಕ್ 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆ ಸಂಬಂಧಿಸಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಅರ್ನಾಬ್ರನ್ನು ಬಂಧಿಸಲಾಗಿದೆ.
ಬುಧವಾರ ಬೆಳಗ್ಗೆ ಅವರ ಮನೆಗೆ ಪೊಲೀಸರು ಬಂದು ಬಂಧಿಸಿ ಕರೆದೊಯ್ದಿದ್ದಾರೆ. ಅರ್ನಾಬ್ರನ್ನು ಬಲವಂತದಿಂದ ವಾಹನಕ್ಕೆ ಹತ್ತಿಸುವ ದೃಶ್ಯಗಳು ಹೊರ ಬಂದಿವೆ. ಕೆಲವು ದಿವಸಗಳ ಹಿಂದೆ ಟಿಆರ್ಪಿ ವಂಚನೆಗೆ ಸಂಬಂಧಿಸಿ ಮುಂಬೈ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ರಿಪಬ್ಲಿಕ್ ಟಿವಿಯ ಹಿರಿಯ ಅಧಿಕಾರಿಗಳನ್ನು ಕರೆಸಿಕೊಂಡು ವಿಚಾರಣೆಯನ್ನು ನಡೆಸಲಾಗಿತ್ತು.












