ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.11: ಬಾಬರಿ ಮಸೀದಿ ಪ್ರಕರಣ ಕೊನೆಗೊಳ್ಳುವ ಹಂತದಲ್ಲಿದ್ದು ಮಸೀದಿಯ ಜಮೀನು ಮುಸ್ಲಿಮರು ಹಿಂದೂಗಳಿಗೆ ದಾನ ನೀಡಬೇಕೆಂದು ಮುಸ್ಲಿಂ ಬುದ್ಧಿಜೀವಿಗಳ ಒಂದು ವಿಭಾಗ ಹೇಳುತ್ತಿದೆ. ಈಗಾಗಲೇ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಮತ್ತು ಮಾಜಿ ಭೂಸೇನೆಯ ಉಪ ಮುಖ್ಯಸ್ಥರೂ ಆಗಿರುವ ಸಮೀರುದ್ದೀನ್ ಶಾ ಈ ವಾದವನ್ನು ಪತ್ರಿಕಾಗೋಷ್ಠಿ ಕರೆದು ಮುಂದಿಟ್ಟಿದ್ದಾರೆ.
ಸುಪ್ರೀಂಕೋರ್ಡು ಆ ಭೂಮಿ ಮುಸ್ಲಿಮರಿಗೆ ಕೊಟ್ಟರೂ ಅಲ್ಲಿ ಮಸೀದಿ ಮಾಡಲು ಸಾಧ್ಯವಿಲ್ಲ ಆದ್ದರಿಂದ ಅದಕ್ಕಿಂತ ಕೋರ್ಟಿನ ತೀರ್ಪು ತಮ್ಮ ಪರ ಇದ್ದರೂ ಅದನ್ನು ಹಿಂದೂಗಳಿಗೆ ಕೊಟ್ಟು ಬಿಡುವುದು ಉತ್ತಮ ಎಂದು ಶಾ ಹೇಳಿದರು. ಶಾಂತಿಗಾಗಿ ಭಾರತೀಯ ಮುಸ್ಲಿಮರು ಎಂಬ ಸಂಘಟನೆಯ ಹೆಸರಿನಲ್ಲಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಯುಪಿಎ ಕಾಲದಲ್ಲಿ ಅಲಿಗಡ ಉಪಕುಲಪತಿಯಾಗಿದ್ದ ಶಾ, ಮೋದಿ ಅಧಿಕಾರಾವಧಿಯಲ್ಲಿಯೂ ಆಸ್ಥಾನದಲ್ಲಿದ್ದು 2017ರಲ್ಲಿ ನಿವೃತ್ತರಾಗಿದ್ದರು.
ತಾನು ವಾಸ್ತವಿಕ ಪ್ರಜ್ಞೆ ಇರುವವ. ವಾಸ್ತವವನ್ನು ಒಪ್ಪದೇ ವಿಧಿಯಿಲ್ಲ ಎಂದು ಶಾ ಹೇಳಿದರು. ಸುಪ್ರೀಂಕೋರ್ಟು ಕೊಟ್ಟರೂ ಅಲ್ಲಿ ಮಸೀದಿ ಕಟ್ಟುವ ವಿಷಯ ಆಗುವುದಲ್ಲ. ಆದ್ದರಿಂದ ಬಾಬರಿ ಮಸೀದಿ ಜಮೀನು ಅತ್ತ ಕೊಟ್ಟು ಅದರ ಬದಲು ಇತರ ಆರಾಧನಾಲಯಗಳ ಬಗ್ಗೆ ಖಚಿತತೆ ಪಡೆಯುವುದು ಅಗತ್ಯವೆಂದು ಶಾ ಹೇಳಿದರು.












