ಸನ್ಮಾರ್ಗ ವಾರ್ತೆ
ಚೆನ್ನೈ,ಅ.11: ಚೀನದ ಅಧ್ಯಕ್ಷ ಶಿಜಿನ್ ಪಿಂಗ್ ಸ್ವಾಗತಿಸುವ ನಿಟ್ಟಿನಲ್ಲಿ ಚೆನ್ನೈ ನಗರ ಶುಚಿಯಾಗಿದೆ ಎಂದು ಮದ್ರಾಸ್ ಹೈಕೋರ್ಟು ಹೇಳಿದೆ. ಮೋದಿ, ಜಿನ್ಪಿಂಗ್ ಶೃಂಗಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಮಾಡಿದ ಚೆನ್ನೈ ನಗರದ ಶುಚೀಕರಣವನ್ನು ಬೆಟ್ಟು ಮಾಡಿ ಹೈಕೋರ್ಟು ಹೀಗೆ ಹೇಳಿದೆ. ಇದರಂತೆ ಬೇರೆ ರಾಷ್ಟ್ರದ ನಾಯಕರು ಬಂದರೆ ತಮಿಳ್ನಾಡು ಒಟ್ಟು ಕ್ಲೀನ್ ಆಗಿಬಿಡಬಹುದು ಎಂದು ಜಸ್ಟಿಸ್ ಶರವಣನ್, ವೈದ್ಯನಾಥನ್ರ ವಿಭಾಗೀಯ ಪೀಠ ವ್ಯಂಗ್ಯೋಕ್ತಿಯಿಂದ ಹೇಳಿತು.
ಗುರುವಾರ ಅಣ್ಣಾ ಡಿಎಂಕೆ ಹೋರ್ಡಿಂಗ್ ಬಿದ್ದು ಐಟಿ ಉದ್ಯೋಗಿ ಯುವತಿ ಮೃತಪಟ್ಟ ಪ್ರಕರಣದಲ್ಲಿ ಯುವತಿ ಶುಭಶ್ರೀ ತಂದೆ ಒಂದು ಕೋ ಟಿರೂಪಾಯಿ ಪರಿಹಾರ ಕೇಳಿ ಅರ್ಜಿ ಸಲ್ಲಿಸಿದ್ದರು. ಅದನ್ನು ವಿಚಾರಣೆಗೆ ಸ್ವೀಕರಿಸುತ್ತಾ ಕೋರ್ಟು ಅಭಿಪ್ರಾಯ ಪ್ರಕಟಿಸಿತು. ಹೋರ್ಡಿಂಗ್ ಬಿದ್ದುದು ಯುವತಿಯ ಸಾವಿಗೆ ಕಾರಣವಾಗಿತ್ತು. ಘಟನೆಯಲ್ಲಿ ಗಾಳಿಯ ವಿರುದ್ಧ ಕೇಸು ದಾಖಲಿಸಬೇಕಿದೆ ಎಂದು ಮಾಜಿ ಸಚಿವ ಸಿ. ಪೊನ್ನಯ್ಯರ ಹೇಳಿಕೆಯನ್ನು ಕೋರ್ಟು ಟೀಕಿಸಿತು. ಶುಭಶ್ರೀಯ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಮಧ್ಯಂತರ ನಷ್ಟ ಪರಿಹಾರ ಮಂಜೂರಾಗಿದೆ ಎಂದು ಪ್ರಾಸಿಕ್ಯೂಶನ್ ಕೋರ್ಟಿಗೆ ತಿಳಿಸಿದೆ.












