ಅಲ್ಪಸಂಖ್ಯಾತ ವಿದ್ಯಾರ್ಥಿಗಳು, ಅಭ್ಯರ್ಥಿಗಳು ಶಿರವಸ್ತ್ರ, ಕೃಪಾಣಗಳನ್ನು ಹೊಂದುವುದರಿಂದ ತಡಯದಿರಿ: ದೆಹಲಿ ಅಲ್ಪಸಂಖ್ಯಾತ ಇಲಾಖೆಯಿಂದ ಸರಕಾರಿ ಕಛೇರಿಗಳಿಗೆ ಆದೇಶ

0
1379

ದೆಹಲಿ ಅಲ್ಪಸಂಖ್ಯಾತ ಇಲಾಖೆಯು ಸರಕಾರಿ ಕಛೇರಿಗಳಿಗೆ ಆದೇಶವನ್ನು ನೀಡಿದ್ದು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಪರೀಕ್ಷೆಗಳಲ್ಲಿ ಹಾಗೂ ನೇಮಕಾತಿಗಳಲ್ಲಿ ಭಾಗವಹಿಸುವಾಗ ಧಾರ್ಮಿಕ ನಂಬಿಕೆಗಳ ಭಾಗವಾಗಿರುವ ಹಕ್ಕುಗಳಿಂದ ತಡೆದಂತೆ ಆದೇಶವನ್ನು ನೀಡಿದೆ.

“ಭಾರತೀಯ ಸಂವಿಧಾನದ ವಿಧಿ 25ರ ಅನ್ವಯ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳಿದ್ದು ಮುಸ್ಲಿಮ್ ಮಹಿಳೆಯರ ಧಾರ್ಮಿಕ ಹಕ್ಕಾಗಿ ಗುರುತಿಸಲ್ಪಡುವ ಶಿರವಸ್ತ್ರ(ಹಿಜಾಬ್), ಪೂರ್ಣ ತೋಳಿನ ಶರ್ಟ್ ಗಳನ್ನು ಧರಿಸಲು ಹಾಗೂ ಸಿಖ್ಖರಿಗೆ ಸಂವಿಧಾನದ ನಿಯಮಾವಧಿಯಲ್ಲಿಯೇ ನೀಡಲಾಗಿರುವ ಅಳತೆಯ ಕೃಪಾಣಗಳನ್ನು ಹೊಂದುವುದರಿಂದ ತಡೆಯಬಾರದು” ಎಂದು ಇಲಾಖೆಯು ತನ್ನ ಆದೇಶದಲ್ಲಿ ತಿಳಿಸಿದೆ.

ಇತ್ತೀಚೆಗೆ ಮುಸ್ಲಿಮ್ ವಿದ್ಯಾರ್ಥಿಗಳಿಗೆ ಅವರ ಧಾರ್ಮಿಕ ಹಕ್ಕಿನ ಭಾಗವಾದ ಸ್ಕಾರ್ಫ್ ಧರಿಸುವುದರಿಂದ ಪರೀಕ್ಷಾ ಇಲಾಖೆಗಳು ತಡೆದಿರುವುದರಿಂದ ಹಲವಾರು ವಿದ್ಯಾರ್ಥಿಗಳು ಅವಕಾಶಗಳನ್ನು ಕೈಚೆಲ್ಲಿ ತಮ್ಮ ಧಾರ್ಮಿಕ ಆಯ್ಕೆಗಳಿಗೆ ಪ್ರಾಮುಖ್ಯತೆಯನ್ನು ನೀಡಿರುವುದು ಕಂಡುಬಂದಿತ್ತು. ಸಂವಿಧಾನವು ಧಾರ್ಮಿಕ ಹಕ್ಕುಗಳನ್ನು ಅಲ್ಪಾಂಖ್ಯಾತ ಸಮುದಾಯಗಳಿಗೆ ನೀಡಿದ್ದರೂ ಕೂಡ ಅವರ ಮೇಲೆ ಬಲವಂತದ ನಿಯಮಾವಳಿಗಳ ಹೇರಿಕಾ ಕ್ರಮಗಳು ಪರೀಕ್ಷಾಂಗಗಳಿಂದ ಕಂಡು ಬರುತ್ತಿದ್ದು ಅಲ್ಪ ಸಂಖ್ಯಾತರನ್ನು ಮತ್ತೊಮ್ಮೆ ಹಿಂದುಳುಯುವಂತೆ ಮಾಡುತ್ತಿರುವ ಸಮಸ್ಯೆಯನ್ನು ಅಲ್ಪಸಂಖ್ಯಾತ ಇಲಾಖೆಯ ಚೇರ್ಮನ್ ಆದ ಝಫರುಲ್ ಇಸ್ಲಾಮ್ ಖಾನ್ ರವರು ಗಂಭೀರವಾಗಿ ಪರಿಗಣಿಸಿದ್ದರು.

ಈ ಆದೇಶದಂತೆ ಈಗಾಗಲೇ ಶಾಲಾಕಾಲೇಜುಗಳ ಪ್ರಾಂಶುಪಾಲರಿಗೆ ಅಧಿಸೂಚನೆಯನ್ನು ನೀಡಲಾಗಿದ್ದು ಈ ಸಮಸ್ಯೆಗೆ ಗುರಿಯಾದ ವಿದ್ಯಾರ್ಥಿಗಳ ಕುರಿತಾದ ಅಂಕಿ ಅಂಶಗಳನ್ನು ಕಲೆ ಹಾಕಲು ತೀರ್ಮಾನಿಸಿದೆ.‌

ಇದಲ್ಲದೇ ಪರೀಕ್ಷಾ ವೇಳೆಯ ಅರ್ಧಗಂಟೆಗೂ ಮುನ್ನ ಮುಸ್ಲಿಮ್ ವಿದ್ಯಾರ್ಥಿನಿಯರ ಧಾರ್ಮಿಕ ಹಕ್ಕುಗಳಿಗೆ ಯಾವುದೇ ರೀತಿಯ ಚ್ಯುತಿ ಬಾರದಂತೆ ಮಹಿಳಾ ನಿರೀಕ್ಷಕರು ಸಂಪೂರ್ಣ ತಪಾಸಣೆ ಗೊಳಪಡಿಸುವ ವ್ಯವಸ್ಥೆಯನ್ನು ಕಲ್ಪಿಸಲು ಇಲಾಖೆಯು ಆದೇಶಿಸಿದೆ.