ಕತಾರ್-ಸಿರಿಯಾ ಸಂಬಂಧ ಯಥಾ ಸ್ಥಿತಿಗೆ ಮರಳುವುದಿಲ್ಲ- ಕತಾರ್ ವಿದೇಶಾಂಗ ಸಚಿವ

0
1062

ಡಮಾಸ್ಕಸ್ ನಲ್ಲಿ ಮತ್ತೆ ರಾಯಭಾರಿ ಕಛೇರಿಯನ್ನು ತೆರೆಯುವ ಅಗತ್ಯವಾಗಲಿ ಅಥವಾ ಸಿರಿಯನ್ ಸರಕಾರದೊಂದಿಗಿನ ಸಂಬಂಧಗಳ ಸಾಮಾನ್ಯೀಕರಣವನ್ನು “ಪ್ರೋತ್ಸಾಹಿಸುವ” ಯಾವುದೇ ಲಕ್ಷಣಗಳಿಲ್ಲವೆಂದು ಕತಾರ್ ನ ವಿದೇಶಾಂಗ ಸಚಿವರು ಹೇಳಿದ್ದಾರೆ.

ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡುತ್ತಾ, ವಿದೇಶಾಂಗ ಸಚಿವ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ರಾಹ್ಮಾನ್ ಅಲ್ ಥಾನಿ ಅವರು ಸಿರಿಯಾಕ್ಕೆ ಅರಬ್ ಲೀಗ್ ಸದಸ್ಯತ್ವವನ್ನು ನೀಡುವುದನ್ನು ಕತಾರ್ ಈಗಲೂ ಖಂಡಿಸುತ್ತದೆ ಎಂದು ಹೇಳಿದರು.

ಎಂಟು ವರ್ಷಗಳ ಕಾಲ ದೀರ್ಘ ಯುದ್ಧಕ್ಕೆ ಕಾರಣವಾಗಿರುವ ಆರಂಭದ ಪ್ರತಿಭಟನೆಗಳಿಗೆ ಸರ್ಕಾರವು ಹಿಂಸಾತ್ಮಕ ಪ್ರತಿಕ್ರಿಯೆ ನೀಡಿದ ಪರಿಣಾಮವಾಗಿ ಅರಬ್ ಲೀಗ್ ನ ಸಿರಿಯಾದ ಸದಸ್ಯತ್ವವು 2011ರಲ್ಲಿ ಅಮಾನತುಗೊಂಡಿದೆ.

“ಮೊದಲ ದಿನದಿಂದಲೂ, ಸದಸ್ಯತ್ವವನ್ನು[ಅರಬ್ ಲೀಗ್ ]ಅಮಾನತುಗೊಳಿಸಿರುವುದಕ್ಕೆ ಕತಾರ್ ಕಾರಣಗಳನ್ನು ಹೊಂದಿತ್ತು ಮತ್ತು ಆ ಕಾರಣಗಳು ಈಗಲೂ ಇವೆ, ಆದ್ದರಿಂದ ಯಾವುದೇ ಪ್ರೋತ್ಸಾಹದಾಯಕ ಅಂಶವನ್ನು ನಾವು ಕಾಣುತ್ತಿಲ್ಲ , “ಎಂದು ಅಲ್ ಥಾನಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕೆಲವು ಅರಬ್ ರಾಷ್ಟ್ರಗಳು, ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ವಿರುದ್ಧ ಬಂಡುಕೋರರನ್ನು ಬೆಂಬಲಿಸಿದ ಕೆಲವರು ಸೇರಿದಂತೆ,ಯುದ್ಧದಲ್ಲಿ ಅವರ ಮತ್ತು ಮಿತ್ರಪಕ್ಷಗಳ ನಿರ್ಣಾಯಕ ಲಾಭದ ನಂತರ ಅವರೊಂದಿಗೆ ಸಮನ್ವಯ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.

ಡಿಸೆಂಬರ್ ನಲ್ಲಿ, ಯುಎಇ ಡಮಾಸ್ಕಸ್ ನಲ್ಲಿ ತನ್ನ ದೂತಾವಾಸವನ್ನು ಪುನಃ ತೆರೆಯಿತು. ಇದು ಒಂದು ಕಾಲದಲ್ಲಿ ಬಂಡುಕೋರರನ್ನು ಬೆಂಬಲಿಸಿದ ಪ್ರಾದೇಶಿಕ ಎದುರಾಳಿಯಿಂದ ರಾಷ್ಟ್ರಪತಿ ಅಸ್ಸಾದ್ ಗೆ ರಾಜತಾಂತ್ರಿಕ ಉತ್ತೇಜನದಂತೆ ಕಂಡುಬಂದಿದೆ.

ಸೌದಿ ಸ್ವಾಮ್ಯದ ಟಿವಿ ಚಾನೆಲ್ ಅಲ್ ಅರಬಿಯಾ ವರದಿಯ ಪ್ರಕಾರ, ಪುನಃ ತೆರೆಯುದರ ಹಿಂದೆ ಸಿರಿಯಾದೊಂದಿಗಿನ ಸಂಬಂಧಗಳನ್ನ ಯಥಾ ಸ್ಥಿತಿಗೆ ತರುವ ಮತ್ತು “ಅರಬ್, ಸಿರಿಯನ್ ವ್ಯವಹಾರಗಳಲ್ಲಿ” ಪ್ರಾದೇಶಿಕ ಹಸ್ತಕ್ಷೇಪದ ಅಪಾಯವನ್ನು ತಡೆಗಟ್ಟುವ ಉದ್ದೇಶವನ್ನು ಹೊಂದಿದೆ ಎಂದು ಯುಎಇ ಹೇಳಿದೆ.

ಯುಎಇಯ ಅತಿದೊಡ್ಡ ಪ್ರಾದೇಶಿಕ ಎದುರಾಳಿ ಇರಾನ್ ಮತ್ತು ಟರ್ಕಿ ಎರಡೂ,ಸಿರಿಯಾದಲ್ಲಿ ಸಂಘರ್ಷದ ನೆಲೆಯಲ್ಲಿ ಎದುರಾಳಿ ತಂಡವನ್ನು ಬೆಂಬಲಿಸಲು ಸೇನಾ ತುಕಡಿಯನ್ನು ಹೊಂದಿದೆ.

ಅಬುಧಾಬಿಯ ಪ್ರಾದೇಶಿಕ ಮೈತ್ರಿಕೂಟಗಳೂ ಸಹ ಅನುಸರಿಸುವುದನ್ನು ನಿರೀಕ್ಷಿಸಲಾಗಿದೆ,ಮತ್ತು ಯುದ್ಧದುದ್ದಕ್ಕೂ ಡಮಾಸ್ಕಸ್ ಜೊತೆಗಿನ ಸಂಬಂಧವನ್ನು ಕಾಯ್ದುಕೊಂಡ ಈಜಿಪ್ಟ್,ಅರಬ್ ಲೀಗ್ ನಿಂದ ಸಿರಿಯಾ ಅಮಾನತನ್ನು ಎತ್ತಲು ಕರೆ ನೀಡುವುದರಲ್ಲಿ ಮುಂಚೂಣಿಯಲ್ಲಿದೆ.

ಮೂಲ: ಅಲ್ ಜಝೀರಾ

ಅನು: ಆಯಿಷತುಲ್ ಅಫೀಫಾ