ಮಣಿಪುರವನ್ನು ಉರಿಸಲು ಬಿಡಬೇಡಿ, ಮುಖ್ಯಮಂತ್ರಿಯನ್ನು ಹೊರಹಾಕಿ -ಕಪಿಲ್ ಸಿಬಲ್

0
227

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಮಣಿಪುರದಲ್ಲಿ ಗಲಭೆ ಪುನಃ ಉದಿಕ್ತ ಸ್ಥಿತಿಗೆ ಬಂದಿದ್ದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್‍ರನ್ನು ಮುಂಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೇಂದ್ರ ಸರಕಾರವನ್ನು ಹಿರಿಯ ವಕೀಲ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಆಗ್ರಹಿಸಿದ್ದಾರೆ.

ಮಣಿಪುರ ಉರಿಯಲು ಇನ್ನೂ ಬಿಡಬೇಡಿ ಎಷ್ಟು ಬೇಗವೋ ಅಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅವರು ಹೇಳಿದರು. ದೃಢತೆಯಿಲ್ಲದ ಸರಕಾರ ಬಿರೇನ್ ಸಿಂಗ್‍ರದ್ದು ಎಂದ ಸೀಬಲ್, ಮಣಿಪುರ ಮತ್ತೆ ಉರಿಯುವುದಕ್ಕೆ ಬಿಡುತ್ತೀರಾ. ಇಂಟರ್ ನೆಟ್ ನಿಷೇಧಿಸುವುದರಿಂದ ಸಮಸ್ಯೆಗೆ ಪರಿಹಾರವಾಗುವುದಿಲ್ಲ ಎಂದು ಹೇಳಿದರು.

ಜುಲೈಯಲ್ಲಿ ಕಾಣೆಯಾದ ಯುವಕ ಮತ್ತು ಯುವತಿಯ ಮೃತದೇಹದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ನಂತರ ಪುನಃ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ವಿದ್ಯಾರ್ಥಿಗಳಿಬ್ಬರೂ ಸಹಾಯ ಮಾಡಿ ಎಂದು ಮೊರೆಯಿಡುತ್ತಿರುವುದು, ನಂತರ ಅವರ ತಲೆ ಕತ್ತರಿಸಿದ ಚಿತ್ರಗಳು ಗಲಭೆ ಮತ್ತೆ ಭುಗಿಲೇಳಲು ಕಾರಣವಾಗಿದ್ದು. ಮಣಿಪುರದಲ್ಲಿ ಇಂಟರ್‌ನೆಟ್ ಬಂದ್ ಮಾಡಲಾಗಿತ್ತು.

ಈ ಹಿಂದೆಯೂ ಗಲಭೆ ತೀವ್ರಗೊಂಡ ವೇಳೆ ಸರಕಾರ ಇಂಟರ್‌ನೆಟ್ ನಿಷೇಧಿಸಿತ್ತು. ಗಲಭೆ ನಿಯಂತ್ರಣಕ್ಕೆ ಬಂದಾಗ ಇಂಟರ್‌ನೆಟ್ ಸೇವೆ ಪುನರಾರಂಭಿಸಲಾಗಿತ್ತು.
 ಆನಂತರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯ ಚಿತ್ರಗಳು ಸಾಮಾಜಿಕ ಮಾಧ್ಯಗಳಲ್ಲಿ ವೈರಲಾಗಿದ್ದು, ಮೇತಿ ಮತ್ತು ಕುಕಿ ವಿಭಾಗಗಳ ನಡುವೆ ಘರ್ಷಣೆ ಶುರುವಾಯಿತು.