ಮುಸ್ಲಿಂ ಸಮುದಾಯವನ್ನು ಗುರಿ ಮಾಡಬೇಡಿ-ಸೀತಾರಾಂ ಯಚೂರಿ

0
333

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ. 8: ನಿಝಾಮುದ್ದೀನ್ ತಬ್ಲೀಗ್ ಸಮ್ಮೇಳನ ಮುಸ್ಲಿಂ ಸಮುದಾಯವನ್ನು ಗುರಿಯನ್ನಾಗಿಸಲು ಬಳಸದಂತೆ ನೋಡಿಕೊಳ್ಳಬೇಕು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ರಾಷ್ಟ್ರಪತಿ ರಾಮನಾಥ ಕೋವಿಂದ್‍ರಿಗೆ ಪತ್ರ ಬರೆದಿದ್ದಾರೆ. ವೈರಸ್ ಹರಡುತ್ತಿರುವುದಕ್ಕೆ ಪ್ರತ್ಯೇಕ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಯತ್ನ ನಡೆಯುತ್ತಿದೆ. ತಬ್ಲೀಗ್ ಜಮಾಅತ್‍ನಿಂದ ಒಂದುವೇಳೆ ಬೇಜವಾಬ್ದಾರಿ ಕಾರ್ಯವೇ ಆಗಿದ್ದರೂ ಮುಸ್ಲಿಮರನ್ನು ಒಟ್ಟಾರೆ ಗುರಿಮಾಡುವುದು ಸರಿಯಲ್ಲ. ಇದು ನಿಲ್ಲಬೇಕಾಗಿದೆ. ಕೊರೊನಾ ವಿರುದ್ಧ ಹೋರಾಟದಲ್ಲಿ ಜನರ ಒಗ್ಗಟ್ಟನ್ನು ಬಾಧಿಸಬಹುದು ಎಂದು ಅವರು ಪತ್ರದಲ್ಲಿ ಬೆಟ್ಟು ಮಾಡಿದ್ದಾರೆ.

ಅಮೆರಿಕದ ಅಧ್ಯಕ್ಷ ಟ್ರಂಪ್‍ರ ಬೆದರಿಕೆಗೆ ಸರಕಾರ ಮಣಿಯಬಾರದೆಂದು ಪ್ರಧಾನಿ ಮೋದಿಯವರೊಡನೆ ಯಚೂರಿ ಆಗ್ರಹಿಸಿದ್ದಾರೆ. ಸ್ವಂತ ಜನರನ್ನು ರಕ್ಷಿಸುವ ಹೊಣೆಗಾರಿಕೆ ಸರಕಾರದ್ದಾಗಿದೆ. ಈ ಸಮಯದಲ್ಲಿ ಟ್ರಂಪ್‍ರ ಒತ್ತಡ, ಬೆದರಿಕೆಗೆ ಮಣಿದು ದುರ್ಲಭ ಮದ್ದುಗಳನ್ನು ಅಮೆರಿಕಕ್ಕೆ ಕೊಡಬಾರದು. ಭಾರತೀಯರ ಜೀವ ಉಳಿಸಬೇಕಾದ ಈ ಹೋರಾಟದಲ್ಲಿ ಯಾವುದೇ ರಾಜಿಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸಬಾರದೆಂದು ಯೆಚೂರಿ ಟ್ವೀಟ್ ಮಾಡಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.