ಸೌದಿ: ಸಣ್ಣ ಉದ್ಯಮ ಸಂಸ್ಥೆಗಳಿಗೆ 3 ವರ್ಷ ತೆರಿಗೆ ವಿನಾಯಿತಿ

0
1690

ಸನ್ಮಾರ್ಗ ವಾರ್ತೆ

ರಿಯಾದ್, ಮಾ. 7: ಸೌದಿ ಅರೇಬಿಯ ಸಣ್ಣ ಸಂಸ್ಥೆಗಳಿಗೆ ಕಾರ್ಮಿಕ ಲೆವಿಯಲ್ಲಿ ವಿನಾಯಿತಿ ಪ್ರಕಟಿಸಿದೆ. ಒಂಬತ್ತಕ್ಕಿಂತ ಕಡಿಮೆ ಕೆಲಸಗಾರರಿರುವ ಸೌದಿಯ ಪ್ರಜೆ ಕೆಲಸಗಾರನಾಗಿರುವ ಸಂಸ್ಥೆಗಳಿಗೆ ಮಾತ್ರ ಈ ವಿನಾಯಿತಿ ಅನ್ವಯವೆಂದು ಸೌದಿ ಸಚಿವ ಸಂಪುಟ ತೀರ್ಮಾನಿಸಿದೆ. ಜನರಲ್ ಆರ್ಗನೈಝೇಶನ್ ಫಾರ್ ಸೋಶಿಯಲ್ ಇನ್ಶುರೆನ್ಸ್ (ಗೋಸಿ) ನಲ್ಲಿ ನೋಂದಾಯಿತ ಸ್ವದೇಶಿ ಮಾಲಕತ್ವದ ಒಂಬತ್ತಕ್ಕಿಂತ ಕಡಿಮೆ ಕೆಲಸಗಾರರಿರುವ ಸಣ್ಣ ವಾಣಿಜ್ಯಿಕ ಸಂಸ್ಥೆಗಳಿಗೆ ಮೂರುವರ್ಷ ಲೆವಿ ಅರ್ಥಾತ್ ತೆರಿಗೆ ವಿನಾಯಿತಿ ನೀಡಲಾಗುವುದು.

ಸಂಸ್ಥೆಯಲ್ಲಿರುವ ಇಬ್ಬರು ವಿದೇಶಿ ಕಾರ್ಮಿಕರ ಲೆವಿಯಲ್ಲಿ ಮೂರು ವರ್ಷದವರೆಗೆ ಈ ವಿನಾಯಿತಿಯ ಲಾಭವನ್ನು ಪಡೆಯಬಹುದಾಗಿದೆ. ಸಂಸ್ಥೆಯ ಮಾಲಕ, ಇನ್ನೊಬ್ಬ ಸ್ವದೇಶಿ ಕೆಲಸಗಾರ ಕಂಪೆನಿಯಲ್ಲಿದ್ದರೆ ನಾಲ್ವರು ವಿದೇಶಿ ಕೆಲಸಗಾರರ ಲೆವಿ ವಿನಾಯಿತಿ ಸಿಗಲಿದೆ. ದೊರೆ ಸಲ್ಮಾನ್‍ರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೊರೊನಾ ಪೀಡಿತ ಪ್ರಧಾನ ವಲಯ ಎಂಬ ನೆಲೆಯಲ್ಲಿ ಲೆವಿ ವಿನಾಯಿತಿ ಘೋಷಿಸಲಾಗಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.