ಆಸ್ಪತ್ರೆಯಲ್ಲಿರುವ ಕೊರೋನಾ ಶಂಕಿತ ಮುಸ್ಲಿಮರಿಗೆ ಉಪವಾಸ ತೊರೆಯಲು ಆಹಾರ ಹಂಚುತ್ತಿರುವ ಹಿಂದೂಗಳು: ಜೈಪುರದಲ್ಲೊಂದು ಭ್ರಾತೃತ್ವದ ಮಾದರಿ

0
1956

ಸನ್ಮಾರ್ಗ ವಾರ್ತೆ

ಜೈಪುರ್ ಏಪ್ರಿಲ್ 29- ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಮುಸ್ಲಿಮರಿಗೆ ಉಪವಾಸವನ್ನು ತೊರೆಯಲು ಬೇಕಾದ ಆಹಾರವನ್ನು ನೀಡುವ ಮೂಲಕ ಇಲ್ಲಿನ ಹಿಂದೂ ಯುವಕರು ಭ್ರಾತೃತ್ವದ ಮಾದರಿಯೊಂದನ್ನು ತೋರಿಸಿಕೊಟ್ಟಿದ್ದಾರೆ.

ಕೊರೋನಾದ ಕಾರಣದಿಂದ ಕೆಲವು ಮುಸ್ಲಿಮರು ಈ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ. ಅವರ ಗಂಟಲು ದ್ರವ ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗಿದ್ದು ಬಿಕನೇರ್ ನ ಪ್ರಯೋಗಾಲಯಕ್ಕೆ ಅವನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಕೊಯಿ ಭೂಕಾ ನಹೀ ಸೊಯೆ ಮತ್ತು ಭಟ್ನರ್ ಕಿಂಗ್ಸ್ ಕ್ಲಬ್ ಎಂಬೆರಡು ತಂಡಗಳು ರಂಜಾನ ಆರಂಭದಿಂದಲೇ ಈ ಆಸ್ಪತ್ರೆಯಲ್ಲಿರುವ ಮುಸ್ಲಿಮರಿಗೆ ಉಪವಾಸವನ್ನು ತೊರೆಯುವುದಕ್ಕೆ ಬೇಕಾದ ಆಹಾರಗಳನ್ನು ನೀಡುತ್ತ ಬಂದಿದೆ. ಇದನ್ನು ಆಸ್ಪತ್ರೆಯ ನಿರ್ದೇಶಕ ಎಸ್ ಶರ್ಮ ಕೂಡ ದೃಢಪಡಿಸಿದ್ದಾರೆ.

ಕೊಯಿ ಭೂಕಾ ನಹೀ ಸೊಯೆ ಸಂಸ್ಥೆಯ ಮುಖ್ಯಸ್ಥ ತರುಣ್ ವಿಜಯ್, ಭಟ್ನರ್ ಕಿಂಗ್ಸ್ ಕ್ಲಬ್ ನ ಅಧ್ಯಕ್ಷ ಕುಲ್ಭೂಷನ್ ಜಿಂದಾಲ್, ಸಹಾಯಕ ವಿಜಯ್, ಉಪಾಧ್ಯಕ್ಷ ಅಗರ್ವಾಲ್ ಮುಂತಾದವರು ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಂ ಭ್ರಾತೃತ್ವವನ್ನು ನೆಲೆಗೊಳಿಸುವ ಬಗ್ಗೆ ಅಭಿಯಾನವನ್ನು ನಡೆಸುತ್ತಿದ್ದಾರೆ.

ಆಸ್ಪತ್ರೆಯ ಅಧಿಕಾರಿ ಎಂಪಿ ಶರ್ಮ ಅವರ ಪ್ರಕಾರ 18 ಕೊರೋನಾ ಶಂಕಿತ ಮುಸ್ಲಿಮರು ಆಸ್ಪತ್ರೆಯಲ್ಲಿದ್ದಾರೆ. ಅವರಲ್ಲಿ ಹೆಚ್ಚಿನವರು ಉಪವಾಸದಲ್ಲಿದ್ದಾರೆ. ಅವರಿಗೆ ಆಹಾರವನ್ನು ನೀಡುವ ಮೂಲಕ ಉಪವಾಸ ತೊರೆಯುವುದಕ್ಕೆ ಈ ತಂಡಗಳು ನೆರವಾಗುತ್ತಿವೆ ಎಂದು ಅವರು ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.