ಶಿಕ್ಷಣ ತಜ್ಞ, ಜಮಾಅತೆ ಇಸ್ಲಾಮೀ ಹಿಂದ್ ಕೇಂದ್ರ ಸಲಹಾ ಸಮಿತಿ ಸದಸ್ಯ ಡಾ.‌ ಮುಹಮ್ಮದ್ ರಫಾತ್ ನಿಧನ

0
520

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಶಿಕ್ಷಣ ತಜ್ಞ, ಇಸ್ಲಾಮೀ ವಿದ್ವಾಂಸ ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಕೇಂದ್ರ ಸಲಹಾ ಸಮಿತಿಯ ಸದಸ್ಯ ಡಾ. ಮುಹಮ್ಮದ್ ರಫಾತ್ ಹೊಸದಿಲ್ಲಿಯ ಅಲ್ ಶಿಫಾ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಜಮಾತೆ ಇಸ್ಲಾಮಿ ಹಿಂದ್‌ನ ಮರ್ಕಝಿ ಮಜ್ಲಿಸೆ ಶೂರಾದ ಸದಸ್ಯರಾಗಿದ್ದ ಅವರು, ಅಧ್ಯಯನ ಮತ್ತು ಸಂಶೋಧನಾ ಕೇಂದ್ರ(CSR)ದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ(JMI)ದಲ್ಲಿ ಅಪ್ಲೈಡ್ ಸೈನ್ಸಸ್ ಆಂಡ್ ಹ್ಯೂಮನಿಟೀಸ್ ವಿಭಾಗದಲ್ಲಿ ಪ್ರೊಫೆಸರ್ ಆಗಿಯೂ ಸೇವೆ ಸಲ್ಲಿಸಿದ್ದ ಡಾ.‌ರಫಾತ್, ‘ಝಿಂದಗಿ ಎ ನೌ’ ಮ್ಯಾಗಝಿನ್‌ನ ಸಂಪಾದಕರಾಗಿಯೂ ಅವರು ಸೇವೆ ಸಲ್ಲಿಸಿದ್ದರು.