ಸನ್ಮಾರ್ಗ ವಾರ್ತೆ
ಬೆಂಗಳೂರು, ಜ. 29: ಗಣರಾಜ್ಯೋತ್ಸವದಂದು ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ವಿದ್ಯಾರ್ಥಿಗಳು ಮಾಡಿದ ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಅಪಹಾಸ್ಯ ಮಾಡಲಾಗಿದೆ ಎಂಬ ದೂರಿಗೆ ಸಂಬಂಧಿಸಿದಂತೆ ಶಾಲೆಯ ಮಕ್ಕಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಾಟಕದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿದ ಶಾಲಾ ಮ್ಯಾನೇಜ್ ಮೆಂಟ್ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ನಿಲೇಶ್ ರಕ್ಸ್ಯಾಲ್ ನೀಡಿದ ದೂರಿನಲ್ಲಿ ಬೀದರಿನ ಶಹೀನ್ ಎಜುಕೇಶನ್ ಇನ್ಸ್ ಟಿಟ್ಯೂಟ್ ವಿರುದ್ಧ ಕೇಸು ದಾಖಲಿಸಲಾಗಿದೆ. 124ಎ (ದೇಶದ್ರೋಹ), 504 (ಶಾಂತಿ ವಾತಾವರಣ ಕದಡಿದ್ದು), 505 -2 ( ದ್ವೇಷ ಹರಡುವ ಹೇಳಿಕೆ), 153-ಎ (ಕೋಮು ದ್ವೇಷ ಹರಡಿದ್ದು) ಮುಂತಾದ ಕಲಂನಡಿ ಕೇಸು ದಾಖಲಾಗಿದೆ.
ರವಿವಾರ ನಡೆದ ನಾಟಕದಲ್ಲಿ ಅಪ್ರಾಪ್ತ ಮಕ್ಕಳು ಪ್ರಧಾನಿಯನ್ನು ಹಾಸ್ಯ ಮಾಡಿದ್ದಾರೆ ಮತ್ತು ಸಿಎಎ, ಎನ್ಆರ್ ಸಿ ಜಾರಿ ಮಾಡಿದರೆ ಒಂದು ಸಮುದಾಯ ದೇಶದಿಂದ ಹೊರಹೋಗಬೇಕಾಗಬಹುದು ಎಂಬ ಸಂದೇಶವನ್ನು ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬೀದರ್ ನ ಮುಹಮ್ಮದ್ ಯೂಸುಫ್ ರಹೀಂರ ಸಾಮಾಜಿಕ ಮೀಡಿಯ ಪುಟದಲ್ಲಿ ಕಂಡು ಬಂದ ವೀಡಿಯೊ ಸರಕಾರದ ನೀತಿಗಳು , ತೀರ್ಮಾನಗಳ ಕುರಿತು ತಪ್ಪಾದ ಸಂದೇಶ ಹರಡುತ್ತಿದೆ ಎಂದು ದೂರುದಾರರು ಹೇಳಿದ್ದಾರೆ. ಎಬಿವಿಪಿ ಶಿಕ್ಷಣ ಸಂಸ್ಥೆಗೆ ಜಾಥಾ ನಡೆಸಿದ ಮೂರು ವಿದ್ಯಾರ್ಥಿಗಳ ಸಂಭಾಷಣೆಯ ದೃಶ್ಯ ವೀಡಿಯೊದಲ್ಲಿದೆ. ಮುಸ್ಲಿಮರು ದೇಶ ಬಿಟ್ಟುಹೋಗಬೇಕೆಂದು ಒಬ್ಬ ವಿದ್ಯಾರ್ಥಿ ಹೇಳುತ್ತಾನೆ. ತಂದೆ, ಅಜ್ಜನ ದಾಖಲೆ ಕೊಡಬೇಕು, ಇಲ್ಲದಿದ್ದರೆ ದೇಶ ಬಿಟ್ಟು ಹೋಗಬೇಕೆಂದು ಮೋದಿ ಹೇಳಿದ್ದಾಗಿ ಇನ್ನೊಬ್ಬ ವಿದ್ಯಾರ್ಥಿ ಹೇಳುತ್ತಾನೆ. ಯಾರಾದರೂ ದಾಖಲೆ ಕೇಳುತ್ತಾ ಬಂದರೆ ಏನು ಮಾಡಬೇಕೆಂದು ಇನ್ನೊಬ್ಬ ವಿದ್ಯಾರ್ಥಿ ಹೇಳುತ್ತಾನೆ. ಆದರೆ ನಾಟಕ ಮ್ಯಾನೇಜ್ ಮೆಂಟ್ ತೀರ್ಮಾನವಲ್ಲ, ಆರನೇ ಏಳನೆ ತರಗತಿ ವಿದ್ಯಾರ್ಥಿಗಳು ಮಾಡಿದ ನಾಟಕದಲ್ಲಿ ಕೆಟ್ಟ ಪರಮಾರ್ಶೆಗಳಿವೆಯೇ ಎಂದು ನಾವು ಪರಿಶೀಲಿಸುತ್ತಿದೇವೆ ಎಂದು ಶಾಲೆಯ ಆಡಳಿತ ವಿಭಾಗದ ಮುಹಮ್ಮದ್ ನಾಸಿಂ ಹೇಳಿದ್ದಾರೆ. ಕಳೆದ ವರ್ಷ ಡಿಸೆಂಬರಿನಲ್ಲಿ ಅರಸ್ಸೆಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ನಿಯಂತ್ರಣದ ಉಡುಪಿಯ ಶ್ರೀರಾಮ ವಿದ್ಯಾಕೇಂದ್ರ ಶಾಲೆಯಲ್ಲಿ ಬಾಬರಿ ಮಸೀದಿ ಧ್ವಂಸದ ಅಣಕು ಪ್ರದರ್ಶನ ಮಾಡಿತ್ತು. ಕೇಂದ್ರ ಸಚಿವ ಸದಾನಂದ ಗೌಡ, ಪುದುಚೇರಿ ಗವರ್ ನರ್ ಕಿರಣ್ ಬೇಡಿ, ಕರ್ನಾಟಕ ಸಚಿವ ಎಚ್. ನಾಗೇಶ್ರ ಮುಂದೆ ಮಕ್ಕಳು ಅಭಿನಯಿಸಿದ್ದರು. ಇದರಲ್ಲಿ ಶಾಲಾ ಮ್ಯಾನೇಜ್ಮೆಂಟ್ನ ನಾಲ್ವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದರು.
ಪೌರತ್ವ ತಿದ್ದುಪಡಿ ಕಾನೂನು ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿ ಕವಿತೆ ಬರೆದ ರಾಜ್ಯದ ಕೊಪ್ಪಳದ ಕವಿ ಸಿರಾಜ್ ಬಿಸರಹಳ್ಳಿ ವಿರುದ್ಧ ಬಿಜೆಪಿಯ ದೂರಿನಲ್ಲಿ ಗಂಗಾವತಿ ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿದ್ದರು. ಕೊಪ್ಪಳ ಜಿಲ್ಲಾಡಳಿತ ಅಯೋಜಿಸಿದ ಅನೆಗುಂಡಿ ಉತ್ಸವದಲ್ಲಿ ಬಿಸರಹಳ್ಳಿ ಪದ್ಯ ಓದಿದ್ದರು. ಪಾರ್ಲಿಮೆಂಟು ಪಾಸು ಮಾಡಿದ ಕಾನೂನನ್ನು ಸರಕಾರಿ ಕಾರ್ಯಕ್ರಮದಲ್ಲಿ ವಿರೋಧಿಸಲಾಗಿದೆ ಎಂದು ದೂರು ನೀಡಲಾಗಿತ್ತು.












