ದುಬೈ| ದಶಮಾನೋತ್ಸವ ಆಚರಿಸಿಕೊಂಡ ಅಮೇರಿಕನ್ ಸ್ಪೆಷಾಲಿಟಿ ಫುಡ್ಸ್ ಕಂಪನಿ: 650 ಉತ್ಪನ್ನಗಳ ಕೈಪಿಡಿ ಬಿಡುಗಡೆ

0
366

ಸನ್ಮಾರ್ಗ ವಾರ್ತೆ

ಅಮೇರಿಕನ್ ಸ್ಪೆಷಾಲಿಟಿ ಫುಡ್ಸ್ ಕಂಪನಿ ದುಬೈನಲ್ಲಿ ತನ್ನ ದಶಮಾನೋತ್ಸವವನ್ನು ಇತ್ತೀಚೆಗೆ ಆಚರಿಸಿಕೊಂಡಿತು. USDA ಪ್ರಾದೇಶಿಕ ಕೃಷಿ ಸಲಹೆಗಾರ, ದುಬೈನ ಅಮೆರಿಕಾ ಪ್ರಧಾನ ರಾಯಭಾರ ಕಚೇರಿಯ ಪ್ರಾಂತೀಯ ಕೃಷಿ ಸಮಾಲೋಚಕ ವ್ಯಾಲೆರಿ ಬ್ರೌನ್‌ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಅಮೇರಿಕದ ಆಹಾರ ಉತ್ಪನ್ನಗಳ ರುಚಿಯನ್ನು ಜಗತ್ತಿನ್ನೆಲ್ಲೆಡೆಗೆ ಹರಡುವ ಅಮೇರಿಕನ್ ಸ್ಪೆಷಾಲಿಟಿ ಫುಡ್ಸ್ ಕಂಪನಿ ತನ್ನ 20 ಉತ್ಪನ್ನ ವಿಭಾಗಗಳೊಂದಿಗೆ 50ಕ್ಕೂ ಹೆಚ್ಚು ದೇಶಗಳಲ್ಲಿ ಹೆಸರುವಾಸಿಯಾಗಿದೆ. ಇದೀಗ ಹೊಸದಾಗಿ 650 ಉತ್ಪನ್ನಗಳ ಸಂಪೂರ್ಣ ವಿವರಗಳನ್ನು ಒಳಗೊಂಡ ಹೊಸ ಕೈಪಿಡಿಯನ್ನು  ಕಂಪನಿಯ ಜಾಗತಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹನಿ ಎಂ. ಹನೀಫ್ ಅವರು ಸಮಾರಂಭದಲ್ಲಿ ಅನಾವರಣಗೊಳಿಸಿದರು.

“ನಾನು ಈ ಸಂಸ್ಥೆಯನ್ನು ಪ್ರಾರಂಭಿಸಿದಾಗ,ಅದು ನನ್ನ ಆಸೆಗಳನ್ನು ಪೂರೈಸಿಕೊಳ್ಳುವ ಗುರಿ ಹೊಂದಿದ್ದ ಒಂದು ಕನಸಾಗಿತ್ತು. ಇದಕ್ಕೆ ಉತ್ಸಾಹವೇ ಮೊದಲ ಅಸ್ತ್ರವಾಗಿತ್ತು. ಅದರ ಮೂಲಕವೇ ನಿರ್ದಿಷ್ಟ ಗುರಿಯನ್ನು ಸಾಧಿಸುವ ಛಲ ಹೊಂದಿದ್ದೆ. ಇದನ್ನು ಮುನ್ನಡೆಸಲು ಎದುರಿಸಿದ ಹಲವು ಸವಾಲು ಮತ್ತು ಹೋರಾಟಗಳ ಹೊರತಾಗಿಯೂ ಕಂಪೆನಿಗಾಗಿ ಪ್ರತಿಯೊಬ್ಬರಿಂದ ನಿರಂತರ ಬೆಂಬಲ ದೊರಕಿದೆ. ನಾವು ನಿರೀಕ್ಷಿಸಿದ್ದ ಮಟ್ಟಕ್ಕಿಂತ ಲಭಿಸಿದ ಹೆಚ್ಚಿನ ಬೆಂಬಲದಿಂದಾಗಿ ನಿರ್ದಿಷ್ಟ ಗುರಿಯನ್ನು ತಲುಪಲು ಸಾಧ್ಯವಾಯಿತು” ಎಂದು ದಶಮಾನೋತ್ಸವ ಕಾರ್ಯಕ್ರಮದಲ್ಲಿ ಕಂಪೆನಿ ಬೆಳೆದು ಬಂದ ವಿವರಗಳನ್ನು ಹನಿ ಎಂ.ಹನೀಫ್ ಹಂಚಿಕೊಂಡರು.

ಹನಿ ಎಂ. ಹನೀಫ್. ಜಾಗತಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್ ಕಂಪನಿ

ಕಾರ್ಯಕ್ರಮದ ಮುಖ್ಯ ಅತಿಥಿ ವ್ಯಾಲೆರಿ ಬ್ರೌನ್ ಕಂಪನಿ ಮತ್ತು ಅದರ ಸಾಧನೆಗಳನ್ನು ಶ್ಲಾಘಿಸಿದರು.

ಹನೀಫ್‌ರವರ ವೃತ್ತಿಪರತೆಯನ್ನು ಕೊಂಡಾಡಿದ ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿ ಮೊರೊಸ್ಲಾವ್ ಹೋಸೆಕ್, “ನನಗೆ ಹಾನಿ ಎಂ ಹನೀಫ್‌ರವರು ಕೇವಲ ಐದು ವರ್ಷಗಳಿಂದ ಪರಿಚಿತರು. ಆದರೆ ಸುಮಾರು ಹತ್ತು ವರ್ಷಗಳಿಂದ ಈ ಸಂಬಂಧ ಇದೆ ಎಂಬಂತೆ ಭಾಸವಾಗುತ್ತದೆ. ಹನೀಫ್‌ರವರ ವ್ಯಕ್ತಿತ್ವ ಮತ್ತು ವ್ಯಾವಹಾರಿಕ ಸಂಬಂಧ ಅಂಥದ್ದು” ಎಂದು ಹೇಳಿದರು‌.

ಅಮೇರಿಕದಲ್ಲಿ ಗುರುತಿಸಿಕೊಂಡಿರುವ ಕಂಪೆನಿಯು ಮೇರಿಲ್ಯಾಂಡ್‌ನಲ್ಲಿ ಕಾರ್ಪೊರೇಟ್ ಕಚೇರಿ ಮತ್ತು ನ್ಯೂಯಾರ್ಕ್‌ನಲ್ಲಿ ಮಾರ್ಕೆಟಿಂಗ್ ಕಛೇರಿಯೊಂದಿಗೆ ಸಂಯೋಜಿಸಲ್ಪಟ್ಟಿದೆ. ಅಮೇರಿಕನ್ ಸ್ಪೆಷಾಲಿಟಿ ಫುಡ್ಸ್ ಕಂಪೆನಿಯು ಸಾಸ್‌, ಮೇಯೋನಾಸ್‌, ಟೋರ್ಟಿಲ್ಲಾ ಚಿಪ್ಸ್, ಸಾಲ್ಸಾ, ಆಲೂಗಡ್ಡೆ ಚಿಪ್ಸ್, ಪಾಪ್‌ಕಾರ್ನ್, ಸಿರಪ್ ಮತ್ತು ಆಲಿವ್‌ ಸೇರಿದಂತೆ 20ಕ್ಕೂ ಹೆಚ್ಚು ವಿಭಾಗಗಳಲ್ಲಿ ವಿವಿಧ ರೀತಿಯ ಉತ್ಪನ್ನಗಳನ್ನು ಹೊಂದಿದೆ.

ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್ ಕಂಪನಿ ದುಬೈ, ಲಂಡನ್ ಮತ್ತು ಮೆಕ್ಸಿಕೋದಲ್ಲಿ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ‌.