ಅಥಣಿ: ಗ್ರಾಮದಿಂದ ಮದ್ಯದಂಗಡಿ ತೆರವುಗೊಳಿಸಲು 10ನೇ ದಿನಕ್ಕೆ ಕಾಲಿಟ್ಟ ಸಹಿ ಸಂಗ್ರಹ ಅಭಿಯಾನ

0
739

ಸನ್ಮಾರ್ಗ ವಾರ್ತೆ

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಮದ್ಯದಂಗಡಿ ತೆರವುಗೊಳಿಸಲು ಸಹಿ ಸಂಗ್ರಹ ಕಾರ್ಯಾಚರಣೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಪಂಚಾಯತಿ ವತಿಯಿಂದ ಸತತ 10 ದಿನಗಳಿಂದ ಪ್ರತಿಯೊಂದು ಮನೆಮನೆಗೆ ತೆರಳಿ ಜನಗಳ ಅನಿಸಿಕೆಯನ್ನು ಸಹಿ ಮುಖಾಂತರ ಸಂಗ್ರಹಿಸುತ್ತಿದ್ದು ಇಲ್ಲಿವರೆಗೆ 70% ಶೇ. ಸಹಿ ಸಂಗ್ರಹವಾಗಿದ್ದು ಅದರಲ್ಲಿ 99% ಪ್ರತಿಷತ ಮದ್ಯದಂಗಡಿ ತೆರವುಗೊಳಿಸಲು ಗ್ರಾಮಸ್ಥರು ಸಹಕರಿಸಿದ್ದಾರೆಂದು ಕರ್ನಾಟಕ ರಾಜ್ಯ ರೈತ ಸಂಘ ಸಂಬರಗಿ ಘಟಕದ ಅಧ್ಯಕ್ಷರಾದ ಗೋಪಾಲ ಮಿಸಾಳ ತಿಳಿಸಿದ್ದಾರೆ‌.

ಸಹಿ ಸಂಗ್ರಹ ಅಭಿಯಾನದ ಕುರಿತು ಮಾತನಾಡಿದ ದೀಪಕ್ ದೇಶಪಾಂಡೆ, ಬಾರ್ ತೆರವುಗೊಳಿಸಲು ಎಲ್ಲ ಗ್ರಾಮಸ್ಥರು ಸಹಕರಿಸಿದ್ದಕ್ಕೆ ಧನ್ಯವಾದ ತಿಳಿಸಿದರು.‌ನಂತರ ಗ್ರಾಮಸ್ತರಾದ ಪಿಂಟು ಕೋಳಿ ಮಾತನಾಡಿ, ಮುಂಬರುವ ದಿನಗಳಲ್ಲಿ ಈ ಸಹಿ ಸಂಗ್ರಹ ಹಾಗೂ ಲಿಖಿತ ಅರ್ಜಿಯ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯ ಶಾಸಕರು ಹಾಗೂ ಸಚಿವರಿಗೂ ಮತ್ತು ಡಿಸಿಎಂ ಲಕ್ಷ್ಮಣ್ ಸವದಿ ಅವರ ಗಮನಕ್ಕೂ ತರಲಿದ್ದು, ನಮ್ಮ ಗ್ರಾಮವನ್ನ ಸಾರಾಯಿ ಮುಕ್ತ ಗ್ರಾಮವನ್ನಾಗಿಸಲು ಸಹಕರಿಸಬೇಕೆಂದು ಮಾಧ್ಯಮದ ಮೂಲಕ ಕೇಳಿಕೊಂಡರು.

ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಮುರಳೀಧರ ದೇಶಪಾಂಡೆ, ವಿಲಾಸ ಟೋನೆ, ವಿಟು ಗುರವ ಸೋನ್ಯಾಬಾಪು, ಚಿಂಚನೆ ಮಲ್ಲು ಕೋಳಿ ಚೇತನ ಕಾಂಬಳೆ, ಉಮೇಶ್ ಶಿಂಧೆ, ಗುರುಪ್ರಸಾದ್ ಕೋಳಿ, ಸುರೇಶ್ ಕಂಟೆಕರ ಸೇರಿದಂತೆ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.